ನವದೆಹಲಿ, ಸೆ 28 (DaijiworldNews/DB): ಮದ್ಯ ನೀತಿ ಹಗರಣದಲ್ಲಿ ಹಿನ್ನೆಲೆಯಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಆಪ್ತ ಸಹಾಯಕ ಉದ್ಯಮಿ ವಿಜಯ್ ನಾಯರ್ ಅವರನ್ನು ಐದು ದಿನಗಳ ಕಾಲ ಸಿಬಿಐ ಕಸ್ಟಡಿಗೆ ವಹಿಸಲಾಗಿದೆ.
ಮದ್ಯದ ಪರವಾನಿಗೆ ಹಂಚಿಕೆಯ ಅಕ್ರಮದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ವಿಜಯ್ ನಾಯರ್ ಅವರನ್ನು ಮಂಗಳವಾರ ಸಿಬಿಐ ಬಂಧಿಸಿತ್ತು. ವಿಚಾರಣೆಗಾಗಿ ಏಳು ದಿನಗಳ ಕಾಲ ವಶಕ್ಕೆ ಸಿಬಿಐ ಕೋರಿದ್ದು, ದೆಹಲಿ ರೌಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಎಂಕೆ ನಾಗ್ಪಾಲ್ ನೇತೃತ್ವದ ನ್ಯಾಯಾಲಯವು ವಿಜಯ್ ಅವರನ್ನು ಐದು ದಿನ ಸಿಬಿಐ ಕಸ್ಟಡಿಗೆ ಒಪ್ಪಿಸಿದೆ.
ಹಗರಣದಲ್ಲಿ ಆರೋಪಿಗಳೆಂದು ಹೆಸರಿಸಲಾದ ಎಂಟು ಖಾಸಗಿ ವ್ಯಕ್ತಿಗಳಗೆ ಸಿಬಿಐ ಆಗಸ್ಟ್ 21 ರಂದು ಹೊರಡಿಸಿದ್ದ ಲುಕ್ಔಟ್ ಸುತ್ತೋಲೆಯಲ್ಲಿ ವಿಜಯ್ ನಾಯರ್ ಹೆಸರಿತ್ತು. ಆದರೆ ಆಗಸ್ಟ್ 19 ರಂದು ನಡೆಸಿದ ದಾಳಿ ವೇಳೆ ಅವರು ನಾಪತ್ತೆಯಾಗಿದ್ದರು ಎನ್ನಲಾಗಿದೆ. ಬಳಿಕ ನಿನ್ನೆ ಅವರನ್ನು ಸಿಬಿಐ ಬಂಧಿಸಿತ್ತು.