ನವದೆಹಲಿ, ಸೆ 28 (DaijiworldNews/MS): ದೇಶಾದ್ಯಂತ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಅದರ ಅಂಗಸಂಸ್ಥೆಗಳನ್ನು ನಿಷೇಧ ಮಾಡಿದ ಬೆನ್ನಲ್ಲೇ ಸರ್ಕಾರ ಅವುಗಳ ಅಧಿಕೃತ ವೆಬ್ಸೈಟ್ನ್ನು ಬ್ಲಾಕ್ ಮಾಡಿದ್ದು, ಸಾಮಾಜಿಕ ಮಾಧ್ಯಮ ಖಾತೆಗಳನ್ನ ನಿರ್ಬಂಧಿಸುವಂತೆ ಕೇಂದ್ರ ಆದೇಶ ಹೊರಡಿಸಿದೆ.
ಅಲ್ಲದೇ ಪಿಎಫ್ಐ ಸಂಘಟನೆಯ ಎಲ್ಲಾ ಸಾಮಾಜಿಕ ಜಾಲತಾಣಗಳಿಗೂ ನಿಷೇಧ ಕುರಿತು ಮಾಹಿತಿ ರವಾನಿಸಿದೆ.
ಅಂಗಸಂಸ್ಥೆಗಳ 'ನಿರ್ಬಂಧಿಸುವ' ಆದೇಶದ ಭಾಗವಾಗಿ, ಅಧಿಕೃತ ವೆಬ್ಸೈಟ್ಗಳು, ಟ್ವಿಟರ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಖಾತೆಗಳು, ಯೂಟ್ಯೂಬ್ ಚಾನೆಲ್ಗಳು ಅಥವಾ PFI, ರಿಹಬ್ ಇಂಡಿಯಾ ಫೌಂಡೇಶನ್ (RIF), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI), ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ( ಎಐಐಸಿ, ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್ (ಎನ್ಸಿಎಚ್ಆರ್ಒ), ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರೆಹಬ್ ಫೌಂಡೇಶನ್ (ಕೇರಳ) ಅನ್ನು ಶಾಶ್ವತವಾಗಿ ನಿರ್ಬಂಧಿಸಲಾಗಿದೆ ಮತ್ತು ಅವರು ಪೋಸ್ಟ್ ಮಾಡಿದ ವಿಷಯಗಳನ್ನು ತೆಗೆದುಹಾಕಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪಿ ಎಫ್ ಐ ಸೇರಿದಂತೆ ಅದರ ಸಹವರ್ತಿ ಸಂಘಟನೆಗಳನ್ನು ಯುಎಪಿಎ ಕಾಯ್ದೆಯಡಿ ಕೇಂದ್ರ ಸರ್ಕಾರ ಮುಂದಿನ 5 ವರ್ಷಗಳ ಕಾಲ ನಿಷೇಧಿಸಿ ಆದೇಶ ಹೊರಡಿಸಿದೆ.