ಗೋರಖ್ಪುರ, ಸೆ 28 (DaijiworldNews/DB): ಮುಂಬೈ ಮೂಲದ ಉದ್ಯಮಿಯೊಬ್ಬರು ಸಂಸದ ಹಾಗೂ ನಟ ರವಿ ಕಿಶನ್ ಅವರಿಗೆ 3.25 ಕೋಟಿ ರೂ. ವಂಚನೆ ಎಸಗಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರವಿಕಿಶನ್ ಅವರ ಸಾರ್ವಜನಿಕ ಸಂಪರ್ಕ ಅಧಿಕಾರಿ ಪವನ್ ದುಬೆ ಈ ಕುರಿತು ಮಾಹಿತಿ ನೀಡಿದ್ದು, ಜೈನ್ ಜಿತೇಂದ್ರ ರಮೇಶ್ ವಂಚನೆ ಎಸಗಿರುವ ಉದ್ಯಮಿ. 2012ರಲ್ಲಿ ಆರೋಪಿಗೆ ರವಿಕಿಶನ್ ಹಣ ನೀಡಿದ್ದರು. ಬಳಿಕ ಹಣವನ್ನು ಹಿಂತಿರುಗಿಸುವಂತೆ ಒತ್ತಾಯಿಸಿದಾಗ ತಲಾ 34 ಲಕ್ಷ ರೂ.ಗಳ 12 ಚೆಕ್ಗಳನ್ನು ನೀಡಿದ್ದರು. ಈ ಚೆಕ್ಗಳಪೈಕೊ ಒಂದನ್ನು ಕಳೆದ ಡಿಸೆಂಬರ್ 7ರಂದು ಎಸ್ಬಿಐ ಶಾಖೆಯಲ್ಲಿ ಠೇವಣಿ ಮಾಡಿದ್ದರತಾದರೂ ಅದು ಬೌನ್ಸ್ ಆಗಿದೆ ಎಂದಿದ್ದಾರೆ.
ಹಣ ನೀಡುವಂತೆ ರವಿ ಕಿಶನ್ ಹಲವು ಬಾರಿ ಒತ್ತಾಯಿಸಿದರೂ ಆರೋಪಿ ಸರಿಯಾದ ಉತ್ತರ ನೀಡುತ್ತಿರಲಿಲ್ಲ. ಹೀಗಾಗಿ ದೂರು ದಾಖಲು ಮಾಡಲಾಗಿದೆ ಎಂದವರು ತಿಳಿಸಿರುವುದಾಗಿ ವರದಿಯಾಗಿದೆ.
ರವಿ ಕಿಶನ್ ಗೋರಖ್ಪುರದ ಲೋಕಸಭಾ ಸಂಸದರಾಗಿದ್ದಾರೆ.