ಬೆಂಗಳೂರು, ಸೆ 28 (DaijiworldNews/DB): ಈ ದೇಶದಲ್ಲಿ ವಿಧ್ವಂಸಕ ಕೃತ್ಯಗಳಿಗೆ ಯಾವತ್ತೂ ಅವಕಾಶವಿಲ್ಲ. ನರೇಂದ್ರ ಮೋದಿ ಮತ್ತು ಅಮಿತ್ ನಾಯಕತ್ವದಲ್ಲಿ ಅವೆಲ್ಲ ಅಸಾಧ್ಯ ಎಂಬುದು ಇಂದು ನಿಜವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಪಿಎಫ್ಐ ಸಂಘಟನೆಗೆ ಐದು ವರ್ಷ ಕಾಲ ನಿಷೇಧ ಹೇರಿರುವ ಕುರಿತು ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಪಿಎಫ್ಐ ಸಂಘಟನೆಯಲ್ಲಿ ತೊಡಗಿಸಿಕೊಂಡವರು ಗಡಿಯಾಚೆಗೆ ಹೋಗಿ ತರಬೇತಿ ಪಡೆದು ಅಲ್ಲಿಂದಲೇ ಕಾರ್ಯಾಚರಣೆಗಳನ್ನು ಆರಂಭಿಸುತ್ತಿದ್ದರು. ಅದೆಷ್ಟೋ ವಿಧ್ವಂಸಕ ಕೃತ್ಯಗಳಲ್ಲಿ ಆ ಸಂಘಟನೆಯಲ್ಲಿದ್ದವರು ಭಾಗಿಯಾಗಿದ್ದು, ಕರ್ನಾಟಕದಲ್ಲಿ ಹಲವು ಕೃತ್ಯ ಎಸಗಿದರು. ಆದರೆ ಅಂತಹವರಿಗೆ ಉಳಿಗಾಲವಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ ಎಂದರು.
ದೇಶದ್ರೋಹಿ ಸಂಘಟನೆಗಳ ನಿಷೇಧಕ್ಕೆ ಎಲ್ಲಾ ರಾಜ್ಯಗಳಿಂದ ಒಕ್ಕೊರಲಿನ ಬೇಡಿಕೆ ವ್ಯಕ್ತವಾಗಿತ್ತು. ಕೇವಲ ಬಿಜೆಪಿ ಮಾತ್ರವಲ್ಲ, ಕಾಂಗ್ರೆಸ್, ಸಿಪಿಎಂ, ಸಿಪಿಐ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳ ಬೇಡಿಕೆಯೂ ಇದಾಗಿತ್ತು. ನ ನಿಷೇಧಿತ ಸಂಘಟನೆಗಳೊಂದಿಗೆ ಸಂಪರ್ಕ ಹೊಂದುವುದನ್ನು ಯಾರೂ ಮಾಡುವಂತಿಲ್ಲ ಎಂದು ಇದೇ ವೇಳೆ ಅವರು ಎಚ್ಚರಿಸಿದರು.