ಕಲಬುರ್ಗಿ ಸೆ 27 (DaijiworldNews/MS): ಪಿಎಸ್ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿಯ ಪತಿ ಮತ್ತು ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಅಧ್ಯಕ್ಷ ರಾಜೇಶ ಹಾಗರಗಿಗೆ ಇದೇ ಮೊದಲ ಬಾರಿಗೆ ಜಾಮೀನು ಮಂಜೂರಾಗಿದೆ.
ಕಲಬುರ್ಗಿಹೈ ಕೋರ್ಟ್ ನಿಂದ ರಾಜೇಶ್ ಹಾಗರಗಿಗೆ ಜಾಮೀನು ಮಂಜೂರಾಗಿದೆ.ಕಳೆದ ಐದೂವರೆ ತಿಂಗಳಿನಿಂದ ಜೈಲಿನಲ್ಲಿದ್ದ ರಾಜೇಶ್ ಹಾಗರಗಿಗೆ ಜಾಮೀನು ದೊರೆತಿದೆ.
ದಿವ್ಯಾ ಹಾಗರಗಿ ಪಿಎಸ್ಐ ಪರೀಕ್ಷಾ ಅಕ್ರಮ ಹಗರಣದ ಮುಖ್ಯ ಆರೋಪಿ. ಅಕ್ರಮದ ಕೇಂದ್ರ ಬಿಂದುವಾಗಿರುವ ಕಲಬುರಗಿಯ ಗೋಕುಲ ನಗರದಲ್ಲಿರುವ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಒಡತಿಯಾಗಿದ್ದಾರೆ.