ನವದೆಹಲಿ, ಸೆ 27 (DaijiworldNews/HR): ಸುಪ್ರೀಂಕೋರ್ಟ್ ಇತಿಹಾಸದಲ್ಲಿ ಮೊದಲ ಬಾರಿಗೆ ವಿಚಾರಣೆಗಳನ್ನು ಇಂದು (ಸೆಪ್ಟೆಂಬರ್ 27) ನೇರ ಪ್ರಸಾರ ಮಾಡಲಾಗುತ್ತಿದೆ.
2018 ರಲ್ಲಿ ಸುಪ್ರೀಂಕೋರ್ಟ್ ವಿಚಾರಣೆಗಳನ್ನು ನೇರ ಪ್ರಸಾರ ಮಾಡಲು ಶಿಫಾರಸು ಮಾಡಲಾಗಿದ್ದು, ಇದೀಗ ಮೂರು ವರ್ಷಗಳ ನಂತರ ಮೊದಲ ಬಾರಿಗೆ ವಿಚಾರಣಾ ಪ್ರಕ್ರಿಯೆಗಳನ್ನು ನೇರ ಪ್ರಸಾರ ಮಾಡಲಾಗುತ್ತಿದೆ.
ಇನ್ನು ಆಗಸ್ಟ್ 26 ರಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ಅವರ ಅಧಿಕಾರವಧಿಯ ಕೊನೆಯ ದಿನವಾಗಿದ್ದು, ಆ ದಿನವನ್ನು ಗುರುತಿಸಲು ಆಗಸ್ಟ್ 26 ರಂದು, ಸುಪ್ರೀಂಕೋರ್ಟ್ ಕಲಾಪಗಳನ್ನು ಆನ್ಲೈನ್ನಲ್ಲಿ ನೇರವಾಗಿ ನೋಡುವ ಟ್ರಯಲ್ ಮಾಡಲಾಗಿದ್ದು, ಇಂದು ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ಕಲಾಪಗಳ ನೇರ ಪ್ರಸಾರ ಮಡಲಾಗುತ್ತಿದೆ.
ನಾಗರಿಕರು ಕೂಡ https://webcast.gov.in/events/MTc5Mg-- ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ವಿಚಾರಣೆಯನ್ನು ನೇರವಾಗಿ ವೀಕ್ಷಿಸಬಹುದು.