ನವದೆಹಲಿ, ಸೆ 27 (DaijiworldNews/HR): ಅರುಣಾಚಲ ಪ್ರದೇಶ-ಅಸ್ಸಾಂನ ಪೂರ್ವ ವಲಯದಲ್ಲಿ ಭಾರತೀಯ ವಾಯುಪಡೆಯ ಮಹಿಳೆಯರು ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್ ಗಳನ್ನು ಮುನ್ನಡೆಸುತ್ತಿದ್ದಾರೆ.
ವಿಶ್ವದ ಅತಿ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್ ಗ್ಲೇಸಿಯರ್ ಸೆಕ್ಟರ್ ನಿಂದ ಹಿಡಿದು ಅರುಣಾಚಲ ಪ್ರದೇಶದ ವಿಜಯನಗರದವರೆಗೆ, ಮಹಿಳಾ ಪೈಲಟ್ ಗಳು ಸಹ ಸೈನಿಕರೊಂದಿಗೆ ಸ್ಥಳೀಯರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.
ಎಸ್ಯು-30 ಎಂಕೆಐ ಫೈಟರ್ ಜೆಟ್ ಫ್ಲೀಟ್ನ ಭಾರತದ ಮೊದಲ ಶಸ್ತ್ರಾಸ್ತ್ರ ವ್ಯವಸ್ಥೆಯ ಆಪರೇಟರ್ ಫ್ಲೈಟ್ ಲೆಫ್ಟಿನೆಂಟ್ ತೇಜಸ್ವಿ ಅವರು ಮಹಿಳಾ ಹಾರಾಟದ ಬಗ್ಗೆ ವಿವರಿಸಿದ್ದು ನಾವು ದೇಶ ಸೇವೆಯ ಮಾಡುವ ಕನಸಿನ ಜೊತೆಗೆ ಹೆಜ್ಜೆಹಾಕುತ್ತುತ್ತಿದ್ದೇವೆ ಎಂದಿದ್ದಾರೆ.