ಸೋಮನಾಥ , ಸೆ.26 (DaijiworldNews/HR): ಆಮ್ ಆದ್ಮಿ ಪಕ್ಷದ ಮುಖಂಡ ಭಾಗೂ ವಾಲಾ ಅವರನ್ನು ಬಲಾತ್ಕಾರದ ಪ್ರಕರಣದಲ್ಲಿ ಪೊಲೀಸರು ವೆರಾವಳದಿಂದ ಬಂಧಿಸಿದ್ದಾರೆ.
ಯುವತಿಯೊಬ್ಬಳು ಭಾಗೂ ವಾಲಾ ಇವರ ವಿರುದ್ಧ ಬಲಾತ್ಕಾರದ ದೂರು ದಾಖಲಿಸಿದ್ದು, ದೂರಿನ ನಂತರ ಆ ಯುವತಿಯ ವೈದ್ಯಕೀಯ ತಪಾಸಣೆ ಮಾಡಿ ದೂರು ದಾಖಲಿಸಲಾಗಿದೆ.
ಇನ್ನು ಭಾಗೂ ವಾಲಾ ಇವರು ಮೊದಲು ಕಾಂಗ್ರೆಸಿನ ಉಪಾಧ್ಯಕ್ಷರಾಗಿದ್ದು, ಇತ್ತಿಚೆಗೆ ಅವರು ಆಮ್ ಆದ್ಮಿ ಪಕ್ಷ ಸೇರಿದ್ದರು. ಅವರದ್ದು ತಮ್ಮದೇ ಆದ ಚಲನಚಿತ್ರ ನಿರ್ಮಾಣದ ಕಂಪನಿ ಇದೆ.