ಕುನೋ, ಸೆ 26 (DaijiworldNews/MS): ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ದಿನದಂದು ನಮೀಬಿಯಾದಿಂದ ಎಂಟು ಚೀತಾಗಳನ್ನು ತಂದು ಮಧ್ಯಪ್ರದೇಶದ ಕುನೋ ಉದ್ಯಾನವನದಲ್ಲಿ ಬಿಡಲಾಗಿದ್ದು, ಇದೀಗಾ ಚೀತಾಗಳಿಗೆ ಹೆಸರನ್ನು ಸೂಚಿಸುವ ಅವಕಾಶವನ್ನು ಸಾರ್ವಜನಿಕರಿಗೆ ಒದಗಿಸಲಾಗಿದೆ.
ಭಾನುವಾರದಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ 'ಮನ್ ಕಿ ಬಾತ್' ನಲ್ಲಿ ಮಧ್ಯಪ್ರದೇಶದ ಕುನೋ ಉದ್ಯಾನಕ್ಕೆ ತರಲಾಗಿರುವ ಅಪರೂಪದ ಚೀತಾಗಳ ಕುರಿತು ಪ್ರಸ್ತಾಪಿಸಿದ್ದು, ಇವುಗಳು ನಮ್ಮ ಪರಿಸರಕ್ಕೆ ಹೊಂದಿಕೊಂಡ ಬಳಿಕ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುವುದು ಎಂದಿದ್ದಾರೆ.
"ಸಾರ್ವಜನಿಕರಿಗೆ ಚಿರತೆಗಳನ್ನು ನೋಡುವ ಅವಕಾಶ ಯಾವಾಗ ಸಿಗುತ್ತದೆ ಎಂದು ದೇಶಾದ್ಯಂತದಿಂದ ಹಲವಾರು ಸಂದೇಶಗಳು ಬರುತ್ತಿವೆ. ಇದಕ್ಕಾಗಿ ಸರ್ಕಾರವು MyGov ವೇದಿಕೆಯಲ್ಲಿ ಸ್ಪರ್ಧೆಯನ್ನು ಆಯೋಜಿಸಿದೆ. ಚೀತಾ ಅಭಿಯಾನಕ್ಕೆ ಮತ್ತು ಚೀತಾಗಳಿಗೆ ಹೆಸರುಗಳನ್ನು ಸೂಚಿಸುವಂತೆ ಸ್ಪರ್ಧೆ ಏರ್ಪಡಿಸಲಾಗಿದೆ. ಚೀತಾಗೆ ಸೂಚಿಸುವ ಹೆಸರುಗಳು "ಸಾಂಪ್ರದಾಯಿಕ" ಮತ್ತು ನಮ್ಮ "ಸಮಾಜ ಮತ್ತು ಸಂಸ್ಕೃತಿ" ಗೆ ಸಂಬಂಧಿಸಿರಬೇಕು. ಇದರಲ್ಲಿ ಎಲ್ಲರೂ ಪಾಲ್ಗೊಳ್ಳಬಹುದಾಗಿದೆ" ಎಂದು ಹೇಳಿದ್ದಾರೆ.
ಅಲ್ಲದೆ ಈ ಅಪರೂಪದ ಚೀತಾಗಳನ್ನು ಮೊದಲಿಗೆ ವೀಕ್ಷಿಸಬೇಕೆಂಬ ಆಸೆ ನೀವು ಹೊಂದಿದ್ದರೆ ಅದಕ್ಕೆ ಅವಕಾಶ ಇಲ್ಲಿದೆ. ಈ ಎಂಟು ಚೀತಾಗಳಿಗೆ ಸೂಕ್ತ ಹೆಸರನ್ನು ಸೂಚಿಸುವವರಿಗೆ ಸಾರ್ವಜನಿಕ ವೀಕ್ಷಣೆಗೆ ತೆರೆದುಕೊಂಡ ನಂತರ ಮೊದಲ ವೀಕ್ಷಣೆಗೆ ಅವಕಾಶ ಮಾಡಿ ಕೊಡಲಾಗುತ್ತದೆ. ಹೀಗಾಗಿ MyGov ಆಪ್ / ವೆಬ್ ಸೈಟ್ ನಲ್ಲಿ ಸ್ಪರ್ಧೆ ಆಯೋಜಿಸಲಾಗುತ್ತಿದ್ದು, ಇದರಲ್ಲಿ ಎಲ್ಲರೂ ಪಾಲ್ಗೊಳ್ಳಬಹುದಾಗಿದೆ. ಎಂಟು ಚೀತಾಗಳಿಗೆ ಸೂಕ್ತ ಹೆಸರನ್ನು ಸೂಚಿಸುವವರಿಗೆ ಸಾರ್ವಜನಿಕ ವೀಕ್ಷಣೆಗೆ ತೆರೆದುಕೊಂಡ ನಂತರ ಮೊದಲ ವೀಕ್ಷಣೆಗೆ ಅವಕಾಶ ಮಾಡಿ ಕೊಡಲಾಗುತ್ತದೆ.