ಶ್ರೀನಗರ, ಸೆ 25 (DaijiworldNews/HR): ಕುಪ್ವಾರ ಜಿಲ್ಲೆಯ ಮಜೀಲ್ ಪ್ರದೇಶದ ಗಡಿ ಬಳಿ ಇಂದು ಬೆಳಗ್ಗೆ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಭಯೋತ್ಪಾದಕರ ಬಳಿ ಇದ್ದ ಎರಡು ಎಕೆ47 ಬಂದೂಕು, ಗುಂಡುಗಳು ಹಾಗೂ ಸ್ಪೋಟಕಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವರು ಪಾಕ್ ಮೂಲದವರಾಗಿರಬಹುದು ಎಂದು ಶಂಕಿಸಲಾಗಿದೆ.
ಇನ್ನು ಭಾರತದ ಗಡಿಯೊಳಗೆ ಉಗ್ರರು ನುಗ್ಗಿರುವ ಮಾಹಿತಿ ಮೇರೆಗೆ ಸೇನೆ ಇಂದು ಕಾರ್ಯಾಚರಣೆ ನಡೆಸಿತ್ತು ಎಂದು ತಿಳಿದುಬಂದಿದೆ.