ನವದೆಹಲಿ, ಸೆ 25 (DaijiworldNews/DB): ಚಂಡೀಗಢ ವಿಮಾನ ನಿಲ್ದಾಣಕ್ಕೆ ಶಹೀದ್ ಭಗತ್ ಸಿಂಗ್ ಅವರ ಹೆಸರಿಡಲು ನಿರ್ಧರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ದ 93 ನೇ ಸಂಚಿಕೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಚಂಡೀಗಢ, ಪಂಜಾಬ್, ಹರಿಯಾಣ ಮತ್ತು ದೇಶದ ಎಲ್ಲ ಜನರನ್ನು ನಾನು ಅಭಿನಂದಿಸಲು ಇಷ್ಟ ಪಡುತ್ತೇನೆ. ಸೆಪ್ಟೆಂಬರ್ 28ರಂದು ತಾಯಿ ಭಾರತಿಯ ಧೈರ್ಯಶಾಲಿ ಪುತ್ರ ಭಗತ್ ಸಿಂಗ್ ಅವರ ಜನ್ಮ ದಿನವಾಗಿದ್ದು, ಅಮೃತ ಮಹೋತ್ಸವದ ವಿಶೇಷ ದಿನ ಇದಾಗಲಿದೆ ಎಂದರು.
ದೀನದಯಾಳ್ ಜೀ ಅವರನ್ನು ತಿಳಿದುಕೊಂಡಷ್ಟೂ ಹೆಚ್ಚು ಕಲಿಯುತ್ತೇವೆ. ಅವರನ್ನು ಅರಿತುಕೊಂಡಷ್ಟೂ ನಾವು ದೇಶವನ್ನು ಇನ್ನಷ್ಟು ಪ್ರೀತಿಸಲು ಸಾಧ್ಯವಿದೆ. ಆಧುನಿಕ, ಸಾಮಾಜಿಕ ಮತ್ತು ರಾಜಕೀಯಾಧಾರಿತವಾಗಿ ಭಾರತದ ತತ್ವಶಾಸ್ತ್ರವು ಜಗತ್ತಿಗೆ ಮಾರ್ಗದರ್ಶಕವಾಗಿ ಹೇಗೆ ಕೆಲಸ ಮಾಡುತ್ತದೆ ಎಂದು ನಮಗೆ ಕಲಿಸಿಕೊಟ್ಟವರು ದೀನ ದಯಾಳ್ ಜೀ ಅವರು ಎಂದವರು ಅಭಿಪ್ರಾಯಪಟ್ಟರು.
ಪ್ಲಾಸ್ಟಿಕ್ನಿಂದ ಪರಿಸರಕ್ಕಾಗುವ ಹಾನಿ ದೊಡ್ಡದು. ಹಬ್ಬ ಹರಿದಿನಗಳಲ್ಲಿ ಜನರು ಪ್ಲಾಸ್ಟಿಕ್ ರಹಿತ ಚೀಲಗಳನ್ನು ಮಾತ್ರ ಬಳಸುವ ಮೂಲಕ ಪರಿಸರ ಹಾನಿಯನ್ನು ತಪ್ಪಿಸಬೇಕು ಎಂದು ಮೋದಿ ಇದೇ ವೇಳೆ ಮನವಿ ಮಾಡಿದರು.