ತಿರುಪತಿ, ಸೆ 25 (DaijiworldNews/HR): ಖಾಸಗಿ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿ ಇಬ್ಬರು ಮಕ್ಕಳು ಸೇರಿ ಓರ್ವ ವೈದ್ಯ ಮೃತಪಟ್ಟಿರುವ ಘಟನೆ ತಿರುಪತಿ ಜಿಲ್ಲೆಯ ರೇಣಿಗುಂಟದಲ್ಲಿರುವ ಬಿಸ್ಮಿಲ್ಲಾ ನಗರದ ಕಾರ್ತಿಕಾ ಕ್ಲಿನಿಕ್ನಲ್ಲಿ ನಡೆದಿದೆ.
ಮಕ್ಕಳನ್ನು ಸಿದ್ಧಾರ್ಥ ರೆಡ್ಡಿ ಮತ್ತು ಕಾರ್ತಿಕೇಯ ಎಂದು ಗುರುತಿಸಲಾಗಿದೆ.
ಬೆಂಕಿ ಅವಘಡದ ವೇಳೆ ಆಸ್ಪತ್ರೆಯಲ್ಲಿ ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಹಾಗೂ ಒಬ್ಬ ವೈದ್ಯ ಇದ್ದರು ಎಂದು ತಿಳಿದುಬಂದಿದೆ.
ಇನ್ನು ಉಸಿರುಗಟ್ಟಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು ಇಬ್ಬರು ಮಹಿಳೆಯರನ್ನು ರಕ್ಷಣಾ ತಂಡ ರಕ್ಷಿಸಿದೆ. ವೈದ್ಯ ಡಾ.ರವಿಶಂಕರ್ ರೆಡ್ಡಿಯನ್ನು ರಕ್ಷಿಸುವಷ್ಟರಲ್ಲಿ ಅವರೂ ಸಾವನ್ನಪ್ಪಿದ್ದಾರೆ.