ನವದೆಹಲಿ, ಸೆ 25 (DaijiworldNews/DB): ಬಾರ್ ಪ್ರವೇಶ ಸಂಬಂಧಿಸಿ ನಡೆದ ಮಾತಿನ ಚಕಮಕಿ ವೇಳೆ ತನ್ನ ಹಾಗೂ ಸ್ನೇಹಿತೆಯರ ಮೇಲೆ ಬಾರ್ ಬೌನ್ಸರ್ಗಳು ಹಲ್ಲೆ ನಡೆಸಿ ಬಟ್ಟೆ ಹರಿದು ಹಾಕಿದ್ದಾರೆ ಎಂದು ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಆರೋಪಿಗಳ ವಿರುದ್ದ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಮಹಿಳೆಯನ್ನು ಎಐಐಎಂಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ದೆಹಲಿಯ ದಕ್ಷಿಣ ಬಡಾವಣೆಯಲ್ಲಿರುವ ಕೋಡ್ ಹೆಸರಿನ ಬಾರ್ಗೆ ತಾನು ಮತ್ತು ಸ್ನೇಹಿತೆಯರು ಹೋಗಿದ್ದಾಗ ಬಾರ್ ಪ್ರವೇಶಕ್ಕೆ ಸಂಬಂಧಿಸಿ ಬೌನ್ಸರ್ಗಳು ಮತ್ತು ನನ್ನ ನಡುವೆ ವಾಗ್ವಾದ ನಡೆಸಿತ್ತು. ಈ ವೇಳೆ ಕುಪಿತರಾದ ಬೌನ್ಸರ್ಗಳು ನನ್ನ ಹಾಗೂ ಸ್ನೇಹಿತೆಯರ ಮೇಲೆ ಹಲ್ಲೆ ನಡೆಸಿ ನಮ್ಮ ಬಟ್ಟೆಗಳನ್ನು ಹರಿದು ಹಾಕಿದ್ದಾರೆ. ಅಲ್ಲದೆ ಅನುಚಿತ ವರ್ತನೆ ತೋರಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಬೌನ್ಸರ್ಗಳ ವಿರುದ್ದ ಎಫ್ಐಆರ್ ದಾಖಲಿಸಿಕೊಳ್ಳಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಬೌನ್ಸರ್ಗಳು ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
2019ರಲ್ಲಿ ತಪಾಸಣೆಗೆಂದು ಆಗಮಿಸಿದ್ದ ಅಬಕಾರಿ ಅಧಿಕಾರಿಗಳನ್ನು ಬಾರ್ನಲ್ಲಿ ಹಲವು ಸಮಯದವರೆಗೆ ಕೂಡಿ ಹಾಕಿ ಹಲ್ಲೆ ನಡೆಸಿದ ಘಟನೆ ಸಂಬಂಧ ಬಾರ್ ಮಾಲಕ, ಪುತ್ರ ಹಾಗೂ ಸಿಬಂದಿ ವಿರುದ್ದ ದೂರು ದಾಖಲಾಗಿತ್ತು ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.