ಶಿವಮೊಗ್ಗ, ಸೆ 24 (DaijiworldNews/HR): ಉಗ್ರ ಸಂಘಟನೆಯ ಜೊತೆ ನಂಟಿರುವ ಶಂಕಿತ ಮಾಜ್ ಮುನೀರ್ ತಂದೆ ಮುನೀರ್ ಅಹಮದ್ ಹೃದಯಾಘಾತದಿಂದ ಮೃತಪಟ್ಟಿದ್ದು, ಇಂದು ಮುನೀರ್ ಅಹಮದ್ ಅಂತ್ಯಕ್ರಿಯೆ ಪಟ್ಟಣದ ಸೊಪ್ಪುಗುಡ್ಡೆ ಖಬರ ಸ್ಥಾನದಲ್ಲಿ ನೆರವೇರಿದ್ದು, ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಸಿ ಬಂಧಿತ ಮಾಜ್ ಮುನೀರ್ಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿ ಕೊಡಲಾಯಿತು.
ಪೊಲೀಸ್ ಕಸ್ಟಡಿಯಲ್ಲಿದ್ದ ಮಾಜ್ನನ್ನು ಶಿವಮೊಗ್ಗ ಗ್ರಾಮಾಂತರ ಠಾಣೆಯಿಂದ ಬಿಗಿ ಬಂದೋಬಸ್ತ್ ನಲ್ಲಿ ಕರೆದೊಯ್ಯಲಾಗಿದ್ದು, ಮಾಜ್ ನನ್ನು ಕರೆತರುತ್ತಿದ್ದ ಹಿನ್ನೆಲೆ ಅವರ ಮನೆ ಬಳಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಇನ್ನು ಆತನನ್ನು ಕರೆ ತರುತ್ತಿದ್ದಂತೆ ಮನೆಯಿಂದ ನೂರು ಮೀಟರ್ ವ್ಯಾಪ್ತಿಯಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಲಾಗಿದ್ದು, ಈ ವೇಳೆ ಕುಟುಂಬದವರು ಮತ್ತು ಕೆಲವು ಆಪ್ತರ ಹೊರತು ಉಳಿದವರಿಗೆ ಮನೆ ಪ್ರವೇಶ ನಿರ್ಬಂಧಿಸಲಾಗಿತ್ತು.