ಕಿಶನ್ಗಂಜ್, ಸೆ 24 (DaijiworldNews/HR): 75 ವರ್ಷಗಳಲ್ಲಿ ನಾವು ಮುಂದೆ ಸಾಗಿದ್ದು, ನಮ್ಮ ಸ್ವಾತಂತ್ರ್ಯವನ್ನು ಅರ್ಥಪೂರ್ಣಗೊಳಿಸಿದ್ದೇವೆ ಎಂಬುದನ್ನು ನಾವು ಜಗತ್ತಿಗೆ ಸಾರಿದ್ದೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, 2014ರಲ್ಲಿ, ನಮ್ಮ ದೇಶವು ವಿಶ್ವ ಆರ್ಥಿಕತೆಯ ಪಟ್ಟಿಯಲ್ಲಿ 11 ನೇ ಸ್ಥಾನದಲ್ಲಿತ್ತು, ಇಂದು ನಾವು ಯುಕೆ ಅನ್ನು ಹಿಂದಿಕ್ಕಿ 5 ನೇ ಸ್ಥಾನವನ್ನು ಪಡೆದುಕೊಂಡಿದ್ದೇವೆ ಎಂದರು.
ಇನ್ನು ಕಿಶನ್ಗಂಜ್ನಲ್ಲಿ, ಬಿಎಸ್ಎಫ್, ಎಸ್ಎಸ್ಬಿ ಮತ್ತು ಐಟಿಬಿಪಿಯ ಡಿಜಿಗಳು ಮತ್ತು ಹಿರಿಯ ಅಧಿಕಾರಿಗಳೊಂದಿಗಿನ ಗಡಿ ಭದ್ರತೆಗೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಪರಿಶೀಲನೆ ನಡೆಸಿದ್ದು, ಗಡಿಯಲ್ಲಿ ಆಧುನಿಕ ಮೂಲಸೌಕರ್ಯವನ್ನು ಉತ್ತೇಜಿಸುವ ಮೂಲಕ ಗಡಿಗಳನ್ನು ರಕ್ಷಿಸುವ ತಮ್ಮ ಸಂಕಲ್ಪವನ್ನು ತೋರಿಸಿದ್ದಾರೆ. 2008-2014 ರ ವೇಳೆಗೆ ಕೇವಲ 23700 ರೂ ಇದ್ದ ಗಡಿ ಮೂಲಸೌಕರ್ಯದ ಬಜೆಟ್ ಅನ್ನು 2014-2020ರಲ್ಲಿ 44600 ಕೋಟಿ ರೂ.ಗೆ ಹೆಚ್ಚಿಸಲಾಯಿತು ಎಂದರು.