ತಮಿಳುನಾಡು, ಸೆ 24 (DaijiworldNews/HR): ತಮಿಳುನಾಡಿನಲ್ಲಿ ಚಲಿಸುತ್ತಿರುವ ರೈಲಿನಿಂದ ಇಳಿಯಲು ಹೋಗಿ ಪ್ಲಾಟ್ ಫಾರ್ಮ್ ನಿಂದ ಕೆಳಗೆ ಬಿದ್ದ ವ್ಯಕ್ತಿಯೊಬ್ಬರನ್ನು ಇಬ್ಬರು ಸಿಆರ್ಪಿಎಫ್ ಸಿಬ್ಬಂದಿಗಳು ರಕ್ಷಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡೀಯೋವನ್ನು ಆರ್ಪಿಎಫ್ ಇಂಡಿಯಾ ಟ್ವಿಟರ್ ಹಂಚಿಕೊಂಡಿದ್ದು, ಘಟನೆಯ ದೃಶ್ಯ ಪ್ಲಾಟ್ಫಾರ್ಮ್ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ವ್ಯಕ್ತಿ ರೈಲು ನಿಲ್ಲುವ ಮೊದಲೇ ಇಳಿಯಲು ಹೋಗಿ ಎಡವಿ ರೈಲು ಕಂಪಾರ್ಟ್ಮೆಂಟ್ ಮತ್ತು ಪ್ಲಾಟ್ಫಾರ್ಮ್ ನಡುವೆ ಸಿಲುಕಿಕೊಂಡಿದ್ದು ಕೂಡಲೇ ಅಲ್ಲಿದ್ದ ಆರ್ಪಿಎಫ್ ಸಹಾಯಕ ಸಬ್-ಇನ್ಸ್ಪೆಕ್ಟರ್ ಅರುಣ್ಜಿತ್ ಮತ್ತು ಲೇಡಿ ಹೆಡ್ ಕಾನ್ಸ್ಟೆಬಲ್ ಪಿಪಿ ಮಿನಿ ಕೂಡಲೇ ಕಾರ್ಯಪ್ರವೃತ್ತರಾಗಿ ವ್ಯಕ್ತಿಯನ್ನು ರಕ್ಷಿಸಿದ್ದಾರೆ.
ಇನ್ನು ಈ ವಿಡಿಯೋ ಸಾಕಷ್ಟು ಗಮನ ಸೆಳೆದಿದ್ದು, ಇಬ್ಬರು ಯೋಧರ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.