ನವದೆಹಲಿ, ಸೆ 24 (DaijiworldNews/HR): ಅಕ್ಟೋಬರ್ 1ರಂದು ಮೊಬೈಲ್ ಕಾಂಗ್ರೆಸ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 5ಜಿ ಸೇವೆಗೆ ಚಾಲನೆ ನೀಡಲಿದ್ದಾರೆ ಎಂದು ರಾಷ್ಟ್ರೀಯ ಬ್ರಾಡ್ಬ್ಯಾಂಡ್ ಮಿಷನ್ ತಿಳಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಷ್ಟ್ರೀಯ ಬ್ರಾಡ್ಬ್ಯಾಂಡ್ ಮಿಷನ್, ಭಾರತದ ಡಿಜಿಟಲ್ ರೂಪಾಂತರ ಮತ್ತು ಸಂಪರ್ಕವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದಕ್ಕೆ ಪ್ರಧಾನಿ ಮೋದಿ ಅವರು ಏಷ್ಯಾದ ಅತಿದೊಡ್ಡ ತಂತ್ರಜ್ಞಾನ ಪ್ರದರ್ಶನ ಇಂಡಿಯಾ ಮೊಬೈಲ್ ಕಾಂಗ್ರೆಸ್ ನಲ್ಲಿ ಭಾರತದಲ್ಲಿ 5G ಸೇವೆಗಳನ್ನು ಹೊರ ತರಲಿದ್ದಾರೆ ಎಂದಿದೆ.
5ಜಿ ಸ್ಪೆಕ್ಟ್ರಮ್ ಹರಾಜು ಒಂದು ಹಂತಕ್ಕೆ ಪೂರ್ಣಗೊಂಡಿದ್ದು, ಪ್ರಮುಖ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ಭಾರತಿ ಏರ್ಟೆಲ್, ವೊಡಾಫೋನ್ ಐಡಿಯಾ ಹಾಗೂ ಅದಾನಿ ಡೇಟಾ ನೆಟ್ವರ್ಕ್ ಪಾಲ್ಗೊಂಡಿದ್ದವು. 1.50 ಲಕ್ಷ ಕೋಟಿ ರೂಪಾಯಿಗಳಿಗೆ 5ಜಿ ಸ್ಪೆಕ್ಟ್ರಮ್ ಹರಾಜಾಗಿದೆ ಎಂದು ಹೇಳಲಾಗಿದೆ.