ಚಿತ್ರದುರ್ಗ, ಸೆ 24 (DaijiworldNews/HR): ಅಧಿಕಾರಕ್ಕಾಗಿ ಕಾಂಗ್ರೆಸ್ ಪಕ್ಷವು ಡರ್ಟಿ ಪಾಲಿಟಿಕ್ಸ್ ಮಾಡುತ್ತಿದೆ. ನೇರವಾಗಿ ಮಾತನಾಡುವ, ಎದುರಿಸುವ ಅಥವಾ ದಾಖಲೆ ನೀಡುವ ಬದಲು ವಾಮ ಮಾರ್ಗ ಅನುಸರಿಸುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಪೇಸಿಎಂ ಎಂಬ ಕಾಂಗ್ರೆಸ್ ಅಭಿಯಾನದ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ನವರದ್ದು ನೈತಿಕತೆ ಇಲ್ಲದ ಡರ್ಟಿ ಪಾಲಿಟಿಕ್ಸ್, ಹೆಸರು ಕೆಡಿಸುತ್ತಿದ್ದು, ಹತಾಶೆಯಾಗಿದ್ದಾರೆ ಎಂದರು.
ಇನ್ನು ಕಾಂಗ್ರೆಸ್ ಪಕ್ಷದವರಿಗೆ ಜನಪರ ಕಾಳಜಿ ಇಲ್ಲ. ಭ್ರಷ್ಟಾಚಾರದ ಬಗ್ಗೆ ದಾಖಲಾತಿ ಸಮೇತ ಆರೋಪ ಮಾಡಲಿ. ಕಾನೂನು ರೀತಿಯಲ್ಲಿ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.