ಬೆಂಗಳೂರು, ಸೆ 24 (DaijiworldNews/MS): ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಭಾರಿ ಜಟಾಪಟಿಗೆ ಕಾರಣವಾಗಿರುವ ಪೇಸಿಂ ಪೋಸ್ಟರ್ ನಿಂದಾಗಿ ಆಡಳಿತಾರೂಢ ಬೊಮ್ಮಾಯಿ ಸರಕಾರ ತೀವ್ರ ಮುಜುಗರಕ್ಕೀಡಾಗಿದೆ. ಹೀಗಾಗಿ ಕಾಂಗ್ರೆಸ್ ಪೇಸಿಎಂ ದಾಳಕ್ಕೆ ಪ್ರತಿಯಾಗಿ ಬಿಜೆಪಿ ಪ್ರತಿದಾಳ ಹೂಡಿದೆ.
ಪೋನ್ ಪೇ ರೀತಿಯಲ್ಲಿ ಕೈ ಪೇ ಕ್ಯೂ ಆರ್ ಕೋಡ್ ಪೋಸ್ಟರ್ ಬಿಡುಗಡೆ ಮಾಡಿದೆ. ನಕಲಿ ಗಾಂಧಿ ಕುಟುಂಬಕ್ಕೆ ಗಾಂಧಿ ಹೆಸರು ಬಂದಿದ್ದು ಹೇಗೆ.? ಅಸಲಿ ಸತ್ಯ ತಿಳಿಯಲು ಇಲ್ಲಿ ಸ್ಕ್ಯಾನ್ ಮಾಡಿ ಅಂತ ಪೋಸ್ಟರ್ ನಲ್ಲಿ ಬರೆದಿದೆ.
ಇದಲ್ಲದೆ ಪೇಸಿಎಂ ಅಂದ್ರೆ ಪೇ ಟು ಕಾಂಗ್ರೆಸ್ ಮೇಡಂ, ಕೆಸಿಸಿ ಅಂದ್ರೆ ಕಂಗಾಲ್ ಕಾಂಗ್ರೆಸ್ ಕಂಪನಿ ಅಂತ ಪೋಸ್ಟರ್ ರಿಲೀಸ್ ಮಾಡಿದೆ. ಇದರಲ್ಲಿ ಸಿದ್ದರಾಮಯ್ಯ, ಡಿಕೆಶಿ, ಪ್ರಿಯಾಂಕ್ ಖರ್ಗೆ, ಕೆಜೆ ಜಾರ್ಜ್, ಎಂಬಿ ಪಾಟೀಲ್ ಹಾಗೂ ರಾಮಲಿಂಗಾರೆಡ್ಡಿ ಹೆಸರುಗಳನ್ನು ಉಲ್ಲೇಖಿಸಿದೆ. ಆದರೆ ಇದಕ್ಕೆಲ್ಲಾ ಡೋಂಟ್ಕೇರ್ ಎನ್ನುತ್ತಾ ಕಾಂಗ್ರೆಸ್ , ಪೇಸಿಎಂ ಕ್ಯಾಂಪೇನ್ ಮುಂದುವರಿದ ಭಾಗವಾಗಿ ಇವತ್ತು ಗ್ರಾಫಿಕ್ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.
ಒಟ್ಟಿನಲ್ಲಿ, ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಸಮರ, ಚುನಾವಣೆ ಹತ್ತಿರ ಬರುತ್ತಿದ್ದಂತೇ ಇನ್ನಷ್ಟು ಜೋರಾಗಬಹುದು ಎನ್ನುವ ಮುನ್ಸೂಚನೆಯನ್ನಂತೂ ನೀಡಿದೆ.