ನವದೆಹಲಿ, ಸೆ 24 (DaijiworldNews/MS): ಭಾರತದಲ್ಲಿ 'UPI Lite' ಲಾಂಚ್ ಆಗಿದೆ. ಆರ್ಬಿಐ ದೇಶದ ಹೊಸ ಯುಪಿಐ ಲೈಟ್ ಅಪ್ಲಿಕೇಶನ್ ಪರಿಚಯಿಸಿದ್ದು ಇದು ಯುಪಿಐ ಮಾದರಿಯಲ್ಲಿಯೇ ಕಾರ್ಯನಿರ್ವಹಿಸಲಿದೆ.
"ಯುಪಿಐ ಲೈಟ್ " ಕಾರ್ಯಾರಂಭದಿಂದ ವಿದೇಶಿ ಮಾಲೀಕತ್ವದ ಪೋನ್ ಪೇ, ಜಿ-ಪೇಗೆ ಹಿನ್ನೆಡೆಯಾಗಬಹುದು. ಯಾಕೆಂದರೆ ಯುಪಿಐ ಲೈಟ್ ತುಂಬಾ ಸುಲಭವಾಗಿದ್ದು, ಅದಕ್ಕೆ ಜನ ಮುಖಮಾಡಬಹುದು ಎಂದು ಕಂಪನಿಗಳಿಗೆ ಭಯ ಶುರುವಾಗಿದೆ.
UPI Lite ಅಪ್ಲಿಕೇಶನ್ನಲ್ಲಿ ಕಡಿಮೆ ಮೌಲ್ಯದ ವಹಿವಾಟುಗಳನ್ನು ನಡೆಸಬಹುದಾಗಿದ್ದು, ಇದಕ್ಕೆ ಯುಪಿಐ ಲೈಟ್ ಎಂದು ಹೆಸರಿಸಲಾಗಿದೆ. ಇದರಲ್ಲಿ ನಿಮ್ಮ ವ್ಯಾಲೆಟ್ಗೆ 2000 ರೂ. ಸೇರಿಸಬಹುದು. ಏಕೆಂದರೆ ಇಂಟರ್ನೆಟ್ ಇಲ್ಲದೆಯೂ ಕೆಲಸ ಮಾಡುವುದರಿಂದ ಕಡಿಮೆ ಮೊತ್ತದ ಪಾವತಿಗಳಿಗೆ ಅನುಮತಿಸಲಿದೆ. ಇದರಿಂದ ಹಣ ಪಾವತಿ ಮಾಡುವುದಕ್ಕೆ ಇಂಟರ್ನೆಟ್ ಕನೆಕ್ಟಿವಿಟಿಗಾಗಿ ಪರದಾಡಬೇಕಾದ ಅನಿವಾರ್ಯತೆ ಎದುರಾಗುವುದಿಲ್ಲ.
ಬಳಕೆದಾರರು ಆನ್ಲೈನ್ನಲ್ಲಿರುವಾಗ ವಾಲೆಟ್ಗೆ ಹಣವನ್ನು ಸೇರಿಸಬೇಕಾಗುತ್ತದೆ. ನಂತರ ಇಂಟರ್ನೆಟ್ ಇಲ್ಲದ ಸಮಯದಲ್ಲಿ ಯಾರಿಗಾದರೂ ಹಣವನ್ನು ಕಳುಹಿಸಬಹುದು. ಆದರೆ ಹಣ ಸ್ವೀಕರಿಸುವ ವ್ಯಕ್ತಿಯು ಆಫ್ಲೈನ್ನಲ್ಲಿದ್ದರೆ ಅವರ ಖಾತೆಗೆ ಹಣ ಕ್ರೆಡಿಟ್ ಆಗಿರುವುದಿಲ್ಲ. ಒಂದೇ ದಿನದಲ್ಲಿ ಅನಿಯಮಿತ ವಹಿವಾಟು ನಡೆಸಬಹುದು. UPI Lite ವೈಶಿಷ್ಟ್ಯ BHIM ಅಪ್ಲಿಕೇಶನ್ನಲ್ಲಿ ಲಭ್ಯವಿದೆ.