ಲಕ್ನೋ, ಸೆ 24 (DaijiworldNews/MS): ಉತ್ತರ ಪ್ರದೇಶದಲ್ಲಿ ಇನ್ಮೇಲೆ ಅತ್ಯಾಚಾರ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ದೊರಕುವುದಿಲ್ಲ. ಸರ್ಕಾರವು ಕ್ರಿಮಿನಲ್ ಪ್ರೊಸೀಜರ್ ಕೋಡ್ (ಉತ್ತರ ಪ್ರದೇಶ ತಿದ್ದುಪಡಿ) ಮಸೂದೆ 2022 ಅನ್ನು ಗುರುವಾರ ವಿಧಾನಸಭೆಯಲ್ಲಿ ಅಂಗೀಕರಿಸಿದೆ.
ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳಲ್ಲಿ ಬಂಧನ ಪೂರ್ವಅಂದರೆ ನಿರೀಕ್ಷಣಾ ಜಾಮೀನನ್ನು ಹೆಚ್ಚು ಕಠಿಣಗೊಳಿಸುವ ಕ್ರಮಕ್ಕಾಗಿ ಈ ಮಸೂದೆ ಅಂಗೀಕಾರ ಮಾಡಲಾಗಿದೆ. ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನಿರಾಕರಿಸುವುದರಿಂದ ಆರೋಪಿಗಳು ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಕಡಿಮೆ. ಆರೋಪಿಗಳು ಸಂತ್ರಸ್ತೆ ಮತ್ತುಇತರ ಸಾಕ್ಷಿಗಳನ್ನು ಹೆದರಿಸುವುದು/ಕಿರುಕುಳ ನೀಡುವುದನ್ನು ತಡೆಯಲು ಇದರಿಂದ ಸಾಧ್ಯವಾಗುತ್ತದೆ
ಲೈಂಗಿಕ ದೌರ್ಜನ್ಯ ಅಲ್ಲದೆ , ದರೋಡೆಕೋರರ ಕಾಯ್ದೆ, ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ (ಎನ್ಡಿಪಿಎಸ್) ಕಾಯ್ದೆ, ಅಧಿಕಾರಿಗಳ ರಹಸ್ಯ ಕಾಯ್ದೆ, ಮತ್ತು ಮರಣದಂಡನೆಗೆ ಸಂಬಂಧಿಸಿದ ಪ್ರಕರಣಗಳನ್ನು ಒಳಗೊಂಡಿರುವ ಅಪರಾಧಗಳನ್ನು ಹೊರತುಪಡಿಸಿ, ನ್ಯಾಯಾಲಯಗಳಿಂದ ಮಧ್ಯಂತರ ಪರಿಹಾರವಾಗಿ ನಿರೀಕ್ಷಣಾ ಜಾಮೀನಿಗೆ ಅರ್ಹರಾಗಿರುವುದಿಲ್ಲ.
ಈ ತಿದ್ದುಪಡಿಯು 2012 ರ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ ಮತ್ತು ಎಲ್ಲಾ ಅತ್ಯಾಚಾರ ಪ್ರಕರಣಗಳಿಗೂ ಇನ್ಮುಂದೆ ಅನ್ವಯಿಸುತ್ತದೆ.