ಉತ್ತರಾಖಂಡ್, ಸೆ 24 (DaijiworldNews/MS): ರಿಷಿಕೇಶ್ ನಲ್ಲಿ ವನ್ ತಾರಾ ರೆಸಾರ್ಟ್ ನ ಸ್ವಾಗತಕಾರಿಣಿ ಆರೋಪ ಪ್ರಕರಣದಲ್ಲಿ ಬಿಜೆಪಿ ಮುಖಂಡ ನ ಪುತ್ರ ಪುಳಕಿತ್ ಆರ್ಯ ಸೇರಿ ಮೂವರು ಬಂಧನಕ್ಕೊಳಗಾಗಿದ್ದಾರೆ.
ಹರಿದ್ವಾರ ಬಿಜೆಪಿ ನಾಯಕ ವಿನೋದ್ ಆರ್ಯ ಅವರ ಮಗ ಪುಳಕಿತ್ ಆರ್ಯ ಮಾಲೀಕತ್ವದ ರೆಸಾರ್ಟ್ ನಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿ ಅಂಕಿತಾ 5 ದಿನಗಳಿಂದ ನಾಪತ್ತೆಯಾಗಿದ್ದರು. ಅವರ ಮೃತದೇಹ ಸಮೀಪದ ಕಾಲುವೆಯಲ್ಲಿ ಪತ್ತೆಯಾಗಿತ್ತು. ಪೊಲೀಸ್ ವಿಚಾರಣೆ ವೇಳೆ ಆಕೆಯನ್ನು ರೆಸಾರ್ಟ್ ನ ಮಾಲಿಕ ಹಾಗೂ ಕಾರ್ಯನಿರ್ವಾಹಕರು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿತ್ತು.
ಶ್ರೀಕೋಟ್ ಗ್ರಾಮದ ಅಂಕಿತ ಭಂಡಾರಿ ಆಕೆಯ ಜಮ್ಮುವಿನಲ್ಲಿದ್ದ ಸ್ನೇಹಿತರೊಂದಿಗಿನ ಆಕೆಯ ವಾಟ್ಸ್ ಆಪ್ ಚಾಟ್ ಸಂವಹನಗಳು ರೆಸಾರ್ಟ್ ನಿರ್ವಾಹಕರ ದೌರ್ಜನ್ಯದ ಕಥೆಯನ್ನು ಬಿಚ್ಚಿಡುತ್ತಿತ್ತು. ಆಕೆ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಈ ಪ್ರಕರಣವನ್ನು ಅನುಮಾನಾಸ್ಪದವಾಗಿ ಪರಿಗಣಿಸಿದ ಡಿಜಿಪಿ ಅಶೋಕ್ ಕುಮಾರ್, ರೆಸಾರ್ಟ್ ನ ಸಿಬ್ಬಂದಿಯ ವಿಚಾರಣೆ, ಹಾಗೂ ಸಿಸಿಟಿವಿ ಫುಟೇಜ್ ಗಳನ್ನು ಪರಿಶೀಲಿಸಲು ಮುಂದಾದರು. ಮಾಲೀಕ ಸೇರಿದಂತೆ ಮೂವರನ್ನೂ ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅಂಕಿತ್ ಗುಪ್ತಾ, ಸೌರಭ್ ಭಾಸ್ಕರ್ ಹಾಗೂ ಪುಳಕಿತ್ ಆರ್ಯ ಬಂಧಿತ ಆರೋಪಿಗಳಾಗಿದ್ದಾರೆ.