ವಡೋದರಾ, ಸೆ 23 (DaijiworldNews/MS): ಚೀತಾಗಳನ್ನು ಭಾರತಕ್ಕೆ ತಂದ ಬಳಿಕ ದೇಶಕ್ಕೆ ಹೊಸ ಉತ್ಸಾಹ ಮರಳಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತ್ನ ನರ್ಮದಾದಲ್ಲಿ ಪರಿಸರ ಸಚಿವರ ರಾಷ್ಟ್ರೀಯ ಸಮ್ಮೇಳನವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ "ಕೆಲವು ದಿನಗಳ ಹಿಂದೆ ಮಧ್ಯಪ್ರದೇಶದಲ್ಲಿ ಚೀತಾ ಮನೆಗೆ ಮರಳಿದ್ದರಿಂದ ಹೊಸ ಉತ್ಸಾಹ ಮರಳಿದೆ" ಎಂದು ಹೇಳಿದರು.
ನಮ್ಮ ದೇಶದಲ್ಲಿ ಗಿರ್ ಸಿಂಹಗಳು, ಹುಲಿಗಳು, ಆನೆಗಳು, ಘೇಂಡಾಮೃಗಗಳು ಮತ್ತು ಚಿರತೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಸಂಖ್ಯೆಯಲ್ಲಿ ಹೆಚ್ಚುತ್ತಿವೆ ಎಂದು ಅವರು ಮಾಹಿತಿ ನೀಡಿದರು.
"ನಮ್ಮ ಅರಣ್ಯ ಪ್ರದೇಶವು ಹೆಚ್ಚಿದೆ ಮತ್ತು ಜೌಗು ಪ್ರದೇಶಗಳ ಪ್ರದೇಶವೂ ವೇಗವಾಗಿ ಹೆಚ್ಚುತ್ತಿದೆ. ಇಂದಿನ ನವ ಭಾರತವು ಹೊಸ ಚಿಂತನೆ ಮತ್ತು ಹೊಸ ವಿಧಾನಗಳೊಂದಿಗೆ ಮುನ್ನಡೆಯುತ್ತಿದೆ. ಇಂದು ಭಾರತವು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯಾಗಿದೆ ಮತ್ತು ನಿರಂತರವಾಗಿ ತನ್ನ ಪರಿಸರವನ್ನು ಬಲಪಡಿಸುತ್ತಿದೆ" ಎಂದು ಪ್ರಧಾನಿ ಮೋದಿ ಹೇಳಿದರು.
ಭಾರತದ ವನ್ಯಜೀವಿಗಳು ಮತ್ತು ಅದರ ಆವಾಸಸ್ಥಾನವನ್ನು ಪುನರುಜ್ಜೀವನಗೊಳಿಸುವ ಮತ್ತು ವೈವಿಧ್ಯಗೊಳಿಸುವ ಅವರ ಪ್ರಯತ್ನಗಳ ಭಾಗವಾಗಿ, ಸೆ.17 ರಂದು ನೇಮಿಬಿಯಾದಿಂದ ತರಲಾದ ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಧಾನಿ ಮೋದಿ ಬಿಡುಗಡೆ ಮಾಡಿದ್ದರು.