ತಿರುವನಂತಪುರ, ಸೆ 23 (DaijiworldNews/HR): ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಭಾರತ್ ಜೋಡೋ ಯಾತ್ರೆಗಾಗಿ ಹಾಕಲಾಗಿರುವ ಫ್ಲೆಕ್ಸ್ ಗಳು ಮತ್ತು ಬ್ಯಾನರ್ಗಳ ಕುರಿತು ಕೇರಳ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರ ಪೀಠ, ಈ ರಾಷ್ಟ್ರದ ಭವಿಷ್ಯದ ಉಸ್ತುವಾರಿ ವಹಿಸುತ್ತೇವೆ ಎನ್ನುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ನ್ಯಾಯಾಲಯ ಮತ್ತು ಸಕ್ಷಮ ಪ್ರಾಧಿಕಾರಗಳ ಆದೇಶಗಳಿಗೆ ಸಂಪೂರ್ಣವಾಗಿ ಯಾವುದೇ ಗೌರವವನ್ನು ನೀಡಲಾಗಿಲ್ಲ ಎಂಬುದು ದುರಂತವಾಗಿದೆ ಎಂದು ಹೇಳಿದೆ.
ಇನ್ನು ತಿರುವನಂತಪುರದಿಂದ ತ್ರಿಶೂರ್ವರೆಗಿನ ರಾಷ್ಟ್ರೀಯ ಹೆದ್ದಾರಿಯ ಪ್ರತಿ ಬದಿಯಲ್ಲಿ ಮತ್ತು ಅದರಾಚೆಗೂ ಒಂದು ನಿರ್ದಿಷ್ಟ ರಾಜಕೀಯ ಪಕ್ಷದಿಂದ ಕಾನೂನುಬಾಹಿರ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಹಾಕಲಾಗಿದ್ದು ಪೊಲೀಸ್ ಸೇರಿದಂತೆ ಸರ್ಕಾರಿ ಇಲಾಖೆಗಳು ಕಣ್ಣು ಮುಚ್ಚಿ ಕುಳಿತಿವೆ ಎಂದು ನ್ಯಾಯಾಲಯವು ಭಾರತ್ ಜೋಡೋ ಯಾತ್ರೆಯನ್ನು ಹೆಸರಿಸದೆ ತನ್ನ ಆದೇಶ ಹೊರಡಿಸಿದೆ.