ನವದೆಹಲಿ, ಸೆ 23 (DaijiworldNews/HR): ಚೀನಾದಂತಹ ಕೃತಕ ದೇಶದಲ್ಲಿ ಸಾಯುವ ಬದಲು, ಮುಕ್ತ ಪ್ರಜಾಪ್ರಭುತ್ವವಾದ ಭಾರತದಲ್ಲಿ ಸಾಯಲು ಬಯಸುತ್ತೇನೆ ಎಂದು ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಟಿಬೆಟ್ನಲ್ಲಿ ನನ್ನ ಸಮುದಾಯಕ್ಕೆ ಮತ್ತು ನನ್ನ ಜೀವಕ್ಕೆ ಅಪಾಯವಿದೆ. ಪರಿಸ್ಥಿತಿ ತುರ್ತು ಮತ್ತು ಹತಾಶವಾಗಿತ್ತು. ಈ ಸಮಯದಲ್ಲಿ ನಾನು ತಪ್ಪಿಸಿಕೊಳ್ಳಲು ನಿರ್ಧರಿಸಿದೆ, ಭಾರತದಲ್ಲಿ ನಿರಾಶ್ರಿತನಾಗಿ ನಾನು ಹೆಚ್ಚು ಸಂತೋಷವಾಗಿದ್ದೇನೆ ಎಂದಿದ್ದಾರೆ.
ಇನ್ನು ನಾವು ಭಾರತದೊಂದಿಗೆ ಸುದೀರ್ಘ ಇತಿಹಾಸವನ್ನು ಹೊಂದಿದ್ದು ನಾನು ಭಾರತ ಸರ್ಕಾರದ ವಿನಮ್ರ ಅತಿಥಿಯಾಗಿದ್ದೇನೆ ಎಂದು ಹೇಳಿದ್ದಾರೆ.