ಪಶ್ಚಿಮ ಬಂಗಾಳ, ಸೆ 23 (DaijiworldNews/HR): ಬಿಜೆಪಿಯ ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ಮೌಸುಮಿ ದಾಸ್ ಮೇಲೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಮೌಸಮಿ ಅವರು ತಮ್ಮ ಮನೆಯ ಕೋಣೆಯಲ್ಲಿ ಮಲಗಿದ್ದಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಪ್ರವೇಶಿಸಿ ಅವರನ್ನು ಥಳಿಸಿ ಅವರಿಗೆ ಚಾಕುವಿನಿಂದ ಇರಿದಿದ್ದಾರೆ. ಈ ದಾಳಿಯಲ್ಲಿ ಟಿಎಂಸಿ ಬೆಂಬಲಿತ ಗೂಂಡಾಗಳು ಭಾಗಿಯಾಗಿದ್ದಾರೆ ಎಂದು ಮೌಸಮಿ ಅವರ ಪತಿ ಪಿಂಟು ಮಂಡಲ್ ಆರೋಪಿಸಿದ್ದಾರೆ.
ಇನ್ನು ಈ ಆರೋಪವನ್ನು ಟಿಎಂಸಿ ವಕ್ತಾರ ಶುವೊಮೊಯ್ ಬಸು, ಮಾಲ್ಡಾ ತಳ್ಳಿಹಾಕಿದ್ದು, ಪೊಲೀಸರ ತನಿಖೆಯಲ್ಲಿ ನಮಗೆ ನಂಬಿಕೆ ಇದೆ ಎಂದು ಹೇಳಿದ್ದಾರೆ.