ದೆಹಲಿ, ಸೆ 23 (DaijiworldNews/HR): ಪಾದರಕ್ಷೆ ತಯಾರಿಕಾ ಕಾರ್ಖಾನೆಯಲ್ಲಿ ಶುಕ್ರವಾರ ಭಾರಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಎಂಎಸ್ಸಿ ಮಾಲ್ ಬಳಿಯ ನರೇಲಾ ಪ್ರದೇಶದಲ್ಲಿರುವ ನಡೆದಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲು ಸುಮಾರು 10 ಅಗ್ನಿಶಾಮಕಗಳು ಸ್ಥಳಕ್ಕೆ ಆಗಮಿಸಿದೆ.
ಇಂದು ಬೆಳ್ಳಗ್ಗೆ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿ ದುರಂತದಲ್ಲಿ ಇದುವರೆಗೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ.
ಇನ್ನು ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳಕ್ಕೆ 10 ಅಗ್ನಿಶಾಮಕ ಟೆಂಡರ್ಗಳನ್ನು ರವಾನಿಸಲಾಗಿದ್ದು, ಬೆಂಕಿ ಈಗ ನಿಯಂತ್ರಣದಲ್ಲಿದೆ, ಇಲ್ಲಿಯವರೆಗೆ ಯಾವುದೇ ಗಾಯಗಳು ವರದಿಯಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.