ನವದೆಹಲಿ, ಸೆ 23 (DaijiworldNews/DB): ಇನ್ಸ್ಟಾಗ್ರಾಮ್ ಸರ್ವರ್ ಡೌನ್ ಆದ ಕಾರಣ ಬಳಕೆದಾರರು ಗುರುವಾರ ಪರದಾಡಿದ ಪ್ರಸಂಗ ನಡೆಯಿತು. ಟ್ವಿಟರ್ನಲ್ಲಿ ಈ ಬಗ್ಗೆ ಟ್ರೆಂಡಿಂಗ್ ಕೂಡಾ ಮಾಡಲಾಗಿದ್ದು, ಕೆಲವರು ತಮಾಷೆಯ ಮೀಮ್ಗಳನ್ನೂ ಹರಿಯಬಿಟ್ಟರು.
ಫೋಟೋ ಮತ್ತು ವೀಡಿಯೋ ಹಂಚಿಕೆ ಅಪ್ಲಿಕೇಶನ್ ಇನ್ಸ್ಟಾಗ್ರಾಂಗೆ ಜಗತ್ತಿನಾದ್ಯಂತ ಅನೇಕ ಬಳಕೆದಾರರಿದ್ದಾರೆ. ಪ್ರತಿನಿತ್ಯ ಹಲವು ಬಬಾರಿ ಇನ್ಸ್ಟಾಗ್ರಾಂ ಬಳಕೆಯಾಗುತ್ತದೆ. ಹೀಗಿರುವಾಗ ಸರ್ವರ್ ಡೌನ್ ಆಗಿಒ ಬಳಕೆ ಅಸಾಧ್ಯವಾದರೆ ಬಳಕೆದಾರರ ಫಜೀತಿ ಹೇಗಿರಬಹುದು? ಅಂತಹುದೇ ಸಂದರ್ಭ ನಿನ್ನೆ ಉಂಟಾಯಿತು. ಸರ್ವರ್ ಡೌನ್ ಆಗಿದ್ದರಿಂದ ತಮ್ಮ ಫೀಡ್ಗಳನ್ನು ರಿಫ್ರೆಶ್ ಮಾಡಲು ಮತ್ತು ಮೆಸೇಜ್ಗಳನ್ನು ಕಳುಹಿಸಲು ಬಳಕೆದಾರರು ಸಂಕಷ್ಟಪಟ್ಟರು. ಅಲ್ಲದೆ ಇನ್ಸ್ಟಾಗ್ರಾಂ ಸರ್ವರ್ ಡೌನ್ ಆಗಿ ಬಳಕೆ ಮಾಡಲು ಸಾಧ್ಯವಾಗದಿರುವ ಕುರಿತು ಇತರ ಸೋಶಿಯಲ್ ಮೀಡಿಯಾಗಳಾದ ಫೇಸ್ಬುಕ್, ಟ್ವಿಟರ್ನಲ್ಲಿ ತಮಾಷೆಯ ಮೀಮ್ಗಳನ್ನು ಹಾಕಿದ್ದಾರೆ. ಟ್ವಿಟರ್ನಲ್ಲಿ ಟ್ರೆಂಡಿಂಗ್ ಮಾಡಿ ಇನ್ಸ್ಟಾಗ್ರಾಂ ಸರ್ವರ್ ಡೌನ್ ಬಗ್ಗೆ ಗಮನ ಸೆಳೆಯುವ ಪ್ರಯತ್ನವನ್ನೂ ಇನ್ಸ್ಟಾ ಬಳಕೆದಾರರು ಮಾಡಿದರು.
ಇನ್ಸ್ಟಾಗ್ರಾಮ್ ರಿಯಲ್ ಟೈಮ್ ಸಮಸ್ಯೆ ಮತ್ತು ಔಟೇಜ್ ಮಾನಿಟರಿಂಗ್ ಸಮಸ್ಯೆ ಉಂಟಾದ ಕಾರಣ ಬಳಕೆದಾರರಿಗೆ ಇನ್ಸ್ಟಾಗ್ರಾಂ ಬಳಕೆಯಲ್ಲಿ ಅಡಚಣೆ ಉಂಟಾಗಿತ್ತು ಎಂದು ತಿಳಿದು ಬಂದಿದೆ.