ಬೆಂಗಳೂರು, ಸೆ 23 (DaijiworldNews/MS): ರಾಜ್ಯದಲ್ಲಿ ಪದವಿ ಪೂರ್ವ ಶಿಕ್ಷಣ ಮಂಡಳಿ ಹಾಗೂ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವಿಲೀನಕ್ಕೆ ಅವಕಾಶ ಕಲ್ಪಿಸುವ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ವಿಧೇಯಕ-2022 ವಿಧಾನಸಭೆಯಲ್ಲಿ ಅನುಮೋದನೆಗೊಂಡಿದೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ ನಾಗೇಶ್ ವಿಧೇಯಕ ಮಂಡಿಸಿದರು.
ನಂತರ ಮಾತನಾಡಿದ ಸಚಿವರು ' ಇವೆರಡರ ವೀಲಿನಕ್ಕೆ ದೀರ್ಘಕಾಲದ ಬೇಡಿಕೆ ಇತ್ತು. ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಕೂಲವಾಗುವಂತೆ ಮತ್ತು ಎರಡು ಮಂಡಳಿಗಳಲ್ಲಿ ಆಡಳಿತಾತ್ಮ ಹಾಗ ಶೈಕ್ಷಣಿಕ ಕಾರ್ಯಭಾರ ಕಡಿಮೆ ಮಾಡುವ ಉದ್ದೇಶದಿಂದ ವಿಲೀನಕ್ಕೆ ಒಪ್ಪಿಗೆ ನೀಡಲಾಗಿದೆ ಎಂದರು.
ಈ ಎರಡು ಮಂಡಳಿಯನ್ನು ಒಟ್ಟುಗೂಡಿಸಿ ಐಎಎಸ್ ಅಧಿಕಾರಿಯೊಬ್ಬರನ್ನು ನಿರ್ದೇಶಕರನ್ನಾಗಿ ಮಾಡಲಾಗುವುದು. ಅದೇ ರೀತಿ ಪರೀಕ್ಷಾ ವಿಧಾನದಲ್ಲಿ ಯಾವುದೇ ಬದಲಾವಣೆ ಮಾರ್ಪಡುಗಳಿರುವುದಿಲ್ಲ. ಮುಂದೆ ಅಸ್ತಿತ್ವಕ್ಕೆ ಬರುವ ಏಕರೂಪ ಮಂಡಳಿ ಎಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳನ್ನು ನಡೆಸಲಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.