ನವದೆಹಲಿ, ಸೆ 23 (DaijiworldNews/HR): ಕೇಂದ್ರ ಸರ್ಕಾರವು ಜಾರಿ ನಿರ್ದೇಶನಾಲಯದ (ಇಡಿ) ಕಾರ್ಯಚಟುವಟಿಕೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕೇಂದ್ರ ಸಂಸ್ಥೆಯನ್ನು ಬಿಜೆಪಿಯು ದುರುಪಯೋಗಪಡಿಸಿಕೊಳುತ್ತಿದೆ ಎಂದು ಕಾಂಗ್ರೆಸ್ನ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಕ್ರಮ ಹಣ ವರ್ಗಾವಣೆಯ ಶಂಕೆ ಇದ್ದಾಗ ಮಾತ್ರ ಇಡಿ ಕಾರ್ಯ ನಿರ್ವಹಿಸುತ್ತದೆ ಅದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.
ಇನ್ನು ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ ಕಾನೂನು ಜಾರಿ (ಇಡಿ) ತನ್ನ ಜವಾಬ್ದಾರಿಗಳನ್ನು ತಿಳಿದಿದ್ದು, ಇದಕ್ಕೆ ಸರ್ಕಾರ ತನ್ನ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದ್ದಾರೆ.