ಉತ್ತರ ಪ್ರದೇಶ, ಸೆ 22 (DaijiworldNews/DB): ನಿದ್ರೆಗೆ ಜಾರಿದ್ದ 7 ವರ್ಷದ ಬಾಲಕಿಯೊಬ್ಬಳು 18 ಗಂಟೆಗಳ ಕಾಲ ಶಾಲಾ ತರಗತಿ ಕೊಠಡಿಯೊಳಗೆ ಲಾಕ್ ಆಗಿದ್ದ ಘಟನೆ ಉತ್ತರ ಪ್ರದೇಶದ ಸಂಭಾಲ್ನಲ್ಲಿಯ ಶಾಲೆಯೊಂದರಲ್ಲಿ ನಡೆದಿದೆ.
1ನೇ ತರಗತಿ ಓದಿತ್ತಿರುವ ಬಾಲಕಿ ಮಂಗಳವಾರ ಶಾಲಾ ಅವಧಿಯಲ್ಲಿ ನಿದ್ದೆಗೆ ಜಾರಿದ್ದಳು. ಶಾಲೆ ಅವಧಿ ಮುಗಿದ ಬಳಿಕ ಸಿಬಂದಿ ಕೊಠಡಿಯನ್ನು ಪರಿಶೀಲಿಸದೇ ಬೀಗ ಹಾಕಿ ತೆರಳಿದ್ದಾರೆ. ಇತ್ತ ಸಂಜೆಯಾದರೂ ಮಗು ಮನೆಗೆ ಬಾರದಿರುವುದರಿಂದ ಚಿಂತಾಕ್ರಾಂತರಾದ ಮನೆಯವರು ಮಗುವಿಗಾಗಿ ಶಾಲೆಯ ಬಳಿ, ಅರಣ್ಯ ಪ್ರದೇಶ ಸೇರಿದಂತೆ ಎಲ್ಲೆಡೆ ಹುಡುಕಾಡಿದ್ದಾರೆ. ಬುಧವಾರ ಬೆಳಗ್ಗೆ 8 ಗಂಟೆಗೆ ಕೊಠಡಿ ಬಾಗಿಲು ತೆರೆದಾಗ ಬಾಲಕಿ ಕೊಠಡಿಯೊಳಗಿರುವುದು ಗೊತ್ತಾಗಿದೆ.
ರಾತ್ರಿಯಿಡೀ ಶಾಲಾ ಕೊಠಡಿಯೊಳಗಿದ್ದಳು. ಬಾಗಿಲು ಹಾಕುವ ಮುನ್ನ ಪರಿಶೀಲಿಸದಕ್ಕೆ ಶಾಲೆ ವಿರುದ್ದ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಶಾಲಾ ಅವಧಿ ಮುಗಿದ ಬಳಿಕ ಕೊಠಡಿ ಪರಿಶೀಲನೆ ನಡೆಸದಿರುವುದು ನಿರ್ಲಕ್ಷ್ಯದ ಪ್ರಕರಣವಾಗಿದೆ. ಸಿಬಂದಿ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಬ್ಲಾಕ್ ಶಿಕ್ಷಣಾಧಿಕಾರಿ ಸಿಂಗ್ ತಿಳಿಸಿರುವುದಾಗಿ ವರದಿಯಾಗಿದೆ.