ನವದೆಹಲಿ, ಸೆ 21 (DaijiworldNews/MS): ತಮ್ಮ ಹಾಸ್ಯದ ಮೂಲಕ ಎಲ್ಲರನ್ನೂ ನಗೆಗಡಲಲ್ಲಿ ತೇಲುವಂತೆ ಮಾಡುತ್ತಿದ್ದ ರಾಜು ಶ್ರೀವಾಸ್ತವ್ ವಿಧಿವಶರಾಗಿದ್ದಾರೆ.ಅವರಿಗೆ 59 ವರ್ಷ ವಯಸ್ಸಾಗಿತ್ತು. ಆಗಸ್ಟ್ 10ರಂದು ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ರಾಜು ಶ್ರೀವಾಸ್ತವ ಅವರಿಗೆ ಹೃದಯಾಘಾತವಾಗಿತ್ತು. ಅಂದೇ ದೆಹಲಿಯ ಏಮ್ಸ್ಗೆ ದಾಖಲಿಸಲಾಯಿತು. ಅಂದಿನಿಂದ ಅವರಿಗೆ ಪ್ರಜ್ಞೆ ಬಂದಿರಲಿಲ್ಲ.
ರಾಜು ಶ್ರೀವಾಸ್ತವ ಅವರು ಶಿಖಾ ಶ್ರೀವಾಸ್ತವ ಮತ್ತು ಇಬ್ಬರು ಮಕ್ಕಳಾದ ಅಂತರಾ ಮತ್ತು ಆಯುಷ್ಮಾನ್ ಅವರನ್ನು ಅಗಲಿದ್ದಾರೆ.
ಸ್ಟ್ಯಾಂಡ್ಅಪ್ ಕಾಮಿಡಿಯಾಗಿ ಹೆಸರು ಗಳಿಸಿದ್ದ ರಾಜು ಶ್ರೀವಾಸ್ತವ್ , ರೇಡಿಯೋ ಮತ್ತು ಟೇಪ್ ರೆಕಾರ್ಡರ್ ಯುಗದಲ್ಲೂ ಅವರ ಹಾಸ್ಯಗಳ ಕ್ಯಾಸೆಟ್ಗಳು ಬಹು ಬೇಡಿಕೆ ಪಡೆದಿತ್ತು. ರಾಜು ಅವರ ಹಾಸ್ಯಗಳು ಹೆಚ್ಚಾಗಿ ಕ್ರಿಕೆಟ್ ಕಾಮೆಂಟರಿ ಮತ್ತು ಮದುವೆಯ ಬೋಜನ ಇತ್ಯಾದಿಗಳನ್ನು ಒಳಗೊಂಡಿತ್ತು.