ನವದೆಹಲಿ, ಸೆ 21 (DaijiworldNews/DB): ಮದುವೆಯಾಗಲು ವರ ಹುಡುಕುತ್ತಿರುವ ಯುವತಿಯೊಬ್ಬಳು ಸಾಫ್ಟ್ವೇರ್ ಎಂಜಿನಿಯರ್ಗಳು ಮಾತ್ರ ಕರೆ ಮಾಡಬೇಡಿ ಎಂದು ದಿನಪತ್ರಿಕೆಯೊಂದರಲ್ಲಿ ನೀಡಿರುವ ಜಾಹೀರಾತು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ಸಾಫ್ಟ್ವೇರ್ ಎಂಜಿನಿಯರ್ಗಳನ್ನು ಟ್ಯಾಗ್ ಮಾಡಿ ಹಲವರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.
ಎಂಬಿಎ ಪೂರೈಸಿರುವ 24 ವರ್ಷದ ಯುವತಿಯೊಬ್ಬಳಿಗೆ ವಿವಾಹವಾಗಲು ವರನ ಅವಶ್ಯಕತೆ ಇದೆ. ಯುವತಿಯು ಉದ್ಯಮ ಕುಟುಂಬದವಳಾಗಿದ್ದು, ಶ್ರೀಮಂತ ಮನೆತನದವಳಾಗಿದ್ದಾಳೆ. ಐಎಎಸ್/ಐಪಿಎಸ್ ಅಧಿಕಾರಿಗಳು, ವೈದ್ಯರು, ಉದ್ಯಮಿಗಳು ಆಕೆಯನ್ನು ಮದುವೆಯಾಗಲು ಮುಂದೆ ಬರಬಹುದು. ಆದರೆ ಸಾಫ್ಟ್ವೇರ್ ಎಂಜಿನಿಯರ್ಗಳು ದಯವಿಟ್ಟು ಕರೆ ಮಾಡಬೇಡಿ ಎಂದು ಜಾಹೀರಾತಿನಲ್ಲಿ ತಿಳಿಸಲಾಗಿದೆ.
ಸಾಫ್ಟ್ವೇರ್ ಎಂಜಿನಿಯರ್ಗಳು ಕರೆ ಮಾಡಬೇಡಿ ಎಂಬ ಸಾಲುಗಳನ್ನು ನೋಡಿ ಹಲವರು ಈ ಜಾಹೀರಾತನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ತರಹೇವಾರಿ ಕಾಮೆಂಟ್ಗಳನ್ನು ಮಾಡಲಾಗುತ್ತಿದೆ. ಸಾಫ್ಟ್ವೇರ್ ಎಂಜಿನಿಯರ್ಗಳಾಗಿರುವ ಸ್ನೇಹಿತರು, ಸಂಬಂಧಿಕರನ್ನು ಟ್ಯಾಗ್ ಮಾಡಿಕೊಂಡು ಜಾಹೀರಾತನ್ನು ತೋರಿಸುತ್ತಿದ್ದಾರೆ. ಅಲ್ಲದೆ ಕೆಲವರು ಸಾಫ್ಟ್ವೇರ್ ಎಂಜಿನಿಯರ್ಗಳಿಗೆ ಭವಿಷ್ಯವಿಲ್ಲ ಎಂದೂ ಕಾಮೆಂಟ್ ಮಾಡುತ್ತಿದ್ದಾರೆ.