ತಿರುಪತಿ, ಸೆ 21 (DaijiworldNews/MS): ಆಂಧ್ರ ಪ್ರದೇಶದ ತಿರುಪತಿ ತಿರುಮಲ ದೇಗುಲಕ್ಕೆ ಚೆನ್ನೈ ಮೂಲದ ಮುಸ್ಲಿಂ ದಂಪತಿ ಮಂಗಳವಾರ 1. ಕೋಟಿ ರೂ. ದೇಣಿಗೆ ನೀಡಿದ್ದಾರೆ.
ಚೆನ್ನೈ ಮೂಲದ ಮುಸ್ಲಿಂ ದಂಪತಿ ಸುಬೀನಾ ಬಾನು ಮತ್ತು ಅಬ್ದುಲ್ ಘನಿ ಈ ದೇಣಿಗೆಯನ್ನು ಟಿಟಿಡಿ ಗೆ ಹಸ್ತಾಂತರಿಸಿದರು. ಈ ಹಣದಲ್ಲಿ ನೂತನವಾಗಿ ನಿರ್ಮಾಣವಾದ ಪದ್ಮಾವತಿ ವಿಶ್ರಾಂತಿ ಗೃಹಕ್ಕೆ 87 ಲಕ್ಷ ರೂ. ಮೌಲ್ಯದ ಪೀಠೋಪಕರಣಗಳು ಮತ್ತು ಪಾತ್ರೆಗಳು ಮತ್ತು ಎಸ್ವಿ ಅನ್ನ ಪ್ರಸಾದ ಟ್ರಸ್ಟ್ಗೆ 15 ಲಕ್ಷ ರೂ. ನೀಡಿರುವುದು ಸೇರಿವೆ.
ಈ ದಂಪತಿಗಳು ದೇವಸ್ಥಾನಕ್ಕೆ ದೇಣಿಗೆ ನೀಡುತ್ತಿರುವುದು ಇದೇ ಮೊದಲಲ್ಲ. 2020ರಲ್ಲಿ ಕೊರೊನಾ ಸಮಯದಲ್ಲಿ ದೇವಾಲಯದ ಆವರಣದಲ್ಲಿ ಸೋಂಕುನಿವಾರಕಗಳನ್ನು ಸಿಂಪಡಿಸಲು ಬಹು ಆಯಾಮದ ಟ್ರಾಕ್ಟರ್-ಮೌಂಟೆಡ್ ಸ್ಪ್ರೇಯರ್ ಅನ್ನು ದೇಣಿಗೆ ನೀಡಿದರು. ಇದಕ್ಕೂ ಮುನ್ನ ದೇವಸ್ಥಾನಕ್ಕೆ ತರಕಾರಿ ಸಾಗಿಸಲು ರೂ.35 ಲಕ್ಷದ ರೆಫ್ರಿಜರೇಟರ್ ಟ್ರಕ್ ಅನ್ನು ಕೊಡುಗೆಯಾಗಿ ನೀಡಿದ್ದರು.