ನವದೆಹಲಿ, ಸೆ 20 (DaijiworldNews/MS): ಹಿಜಾಬ್ ವಿವಾದ ಕುರಿತು ಸುಪ್ರೀಂಕೋರ್ಟ್ನಲ್ಲಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕರ್ನಾಟಕ ಸರ್ಕಾರದ ಆದೇಶವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ʻವೇದ ಪಾಠ ಶಾಲೆಗಳಲ್ಲಿ ಧೋತಿ ಧರಿಸಬಹುದು. ಆದರೆ ಜಾತ್ಯತೀತ ಶಿಕ್ಷಣ ಸಂಸ್ಥೆಗಳಲ್ಲಿ ಅಲ್ಲಿ ನಿಗದಿಪಡಿಸಿರುವ ವಸ್ತ್ರ ಸಂಹಿತೆಯನ್ನೇ ಪಾಲಿಸಬೇಕು. ಈ ಬಗ್ಗೆ ಸರ್ಕಾರ ತನ್ನ ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆʼ ಎಂದು ವಾದಿಸಿದ್ದಾರೆ.
ಇನ್ನು ಇರಾನ್ನಲ್ಲಿ ಹಿಜಾಬ್ ವಿರುದ್ಧದ ಪ್ರತಿಭಟನೆಗಳು ನಡೆಯುತ್ತಿದ್ದು ವಿಚಾರಣೆ ವೇಳೆ ಇರಾನ್ನಲ್ಲಿ ಹಿಜಾಬ್ ವಿರುದ್ಧದ ಪ್ರತಿಭಟನೆಯನ್ನು ರಾಜ್ಯ ಸರ್ಕಾರ ಪ್ರಸ್ತಾಪಿಸಿದೆ. ಹಿಜಾಬ್ ವಿರುದ್ಧ ಇರಾನ್ನಲ್ಲಿ ಮಹಿಳೆಯರು ದನಿಯೆತ್ತಿದ್ದಾರೆ. ಹಿಜಾಬ್ ಧರಿಸುವುದು ಅನಿವಾರ್ಯವಲ್ಲ ಎಂದು ಸರ್ಕಾರದ ಪರ ವಕೀಲರು ಹೇಳಿದ್ದಾರೆ.
ಹಿಜಾಬ್ ಅರ್ಜಿ ಕುರಿತು ನಾಳೆಯೂ ಸುಪ್ರೀಂನಲ್ಲಿ ವಿಚಾರಣೆ ಮುಂದುವರಿಯಲಿದೆ.