ವಿಧಾನಸಭೆ, ಸೆ 20 (DaijiworldNews/HR): ಜಿಮ್ಗಳಲ್ಲಿ ನೀಡುವ ಪ್ರೊಟೀನ್ ಪೌಡರ್ ಬಳಕೆಯಿಂದ ಆರೋಗ್ಯ ಸಮಸ್ಯೆಯಾಗುತ್ತಿರುವ ವಿಚಾರ ಇಂದು ವಿಧಾನಸಭೆಯಲ್ಲಿ ಸದ್ದು ಮಾಡಿದೆ.
ಸಾಂದರ್ಭಿಕ ಚಿತ್ರ
ಸರಕಾರದ ಮುಖ್ಯ ಸಚೇತಕ ಸತೀಶ್ ರೆಡ್ಡಿ ಶೂನ್ಯ ವೇಳೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸರಕಾರಕ್ಕೆ ಸೂಚನೆ ನೀಡಿದ್ದಾರೆ.
ಇನ್ನು ಜಿಮ್ಗಳಲ್ಲಿ ನೀಡುವ ಪ್ರೊಟೀನ್ ಪೌಡರ್ ವೈಜ್ಞಾನಿಕವಾಗಿ ಇದೆಯೋ, ಇಲ್ವೋ ಎಂಬುದನ್ನು ಪತ್ತೆ ಹಚ್ಚಿ. ಆರೋಗ್ಯ, ಗೃಹ, ಹಾಗೂ ಆಹಾರ ಇಲಾಖೆಗಳ ಸಚಿವರು ಸಭೆ ಮಾಡಿ ತೀರ್ಮಾನ ಕೈಗೊಳ್ಳಿ ಎಂದಿದ್ದಾರೆ.
ದಪ್ಪ ಇದ್ದವರು ಸಣ್ಣ ಆಗುತ್ತೀರಾ ಅಂದರೆ ಯಾರಿಗೆ ತಾನೇ ಖುಷಿ ಇರಲ್ಲ? ಇಲ್ಲಿ ಯಾರಾದರೂ ದಪ್ಪ ಇರುವವರಿಗೆ ಆ ಪೌಡರ್ ಕೊಟ್ಟು ಪರಿಣಾಮ ನೋಡಿ ಎಂದು ಕಾಗೇರಿ ನಗುತ್ತಾ ಸಲಹೆ ನೀಡಿದ್ದಾರೆ.