ಬೆಂಗಳೂರು, ಸೆ 20 (DaijiworldNews/MS): 2023ರ ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕಾಂಗ್ರೆಸ್ ವಿರುದ್ಧ ಬಿಜೆಪಿಯೂ ಹೊರಟಕ್ಕಿಳಿದಿದೆ. ಕಾಂಗ್ರೆಸ್ ವಿರುದ್ದ ಮತ್ತೆ ಭ್ರಷ್ಟಾಚಾರದ ವಿಚಾರವನ್ನು ಕೆದಕಿರುವ ಬಿಜೆಪಿಯೂ, "ಸಿದ್ದು-ಡಿಕೆಶಿ ಭ್ರಷ್ಟಾಚಾರದ ಗೇಟ್ಕೀಪರ್ಗಳು" ಎಂದು ಲೇವಡಿ ಮಾಡಿದೆ.
ಕೆಪಿಸಿಸಿ ಅಧ್ಯಕ್ಷರೇ, ಭ್ರಷ್ಟಾಚಾರದ ಕೇಸ್ನಲ್ಲಿ ಬೇಲ್ ಮೇಲಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಜನರೆದುರು ನಾಟಕ ಆಡುತ್ತಿದ್ದಾರೆ. ಇವರಿಬ್ಬರು ಭ್ರಷ್ಟಾಚಾರದ ಗೇಟ್ಕೀಪರ್ಗಳು ಎಂದು ಬಿಜೆಪಿ ಟ್ವೀಟ್ ಮಾಡಿದೆ. ಇದರ ಜೊತೆ ವಿಡಿಯೋವನ್ನು ಕೂಡ ಟ್ವೀಟರ್ನಲ್ಲಿ ಹಾಕಿದ್ದು, ಕಾಂಗ್ರೆಸ್ನ ಇಬ್ಬರು ದೊಡ್ಡ ನಾಯಕರ ಮೇಲೆ ಮುಗಿ ಬಿದ್ದಿದೆ. ಕಾಂಗ್ರೆಸ್ನ ಬಣ್ಣ ಬಯಲಾಗುತ್ತಿದೆ ಎಂದು ವ್ಯಂಗ್ಯವಾಡಿದೆ.
ಐಎನ್ ಸಿ ಅಂದ್ರೆ ಐ ನೀಡ್ ಕಮಿಷನ್ , ಸಿದ್ದರಾಮಯ್ಯ ಅವಧಿಯ ಕಾಂಗ್ರೆಸ್ ಸರ್ಕಾರ 100% ಕಮಿಷನ್ ಸರ್ಕಾರವಾಗಿತ್ತು ಎನ್ನುವುದಕ್ಕೆ ಶಿಕ್ಷಕರ ಅಕ್ರಮ ನೇಮಕಾತಿ ಹಗರಣವೇ ಸಾಕ್ಷಿ. ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ಭ್ರಷ್ಟಾಚಾರ ಎಂದರೆ ಕಾಂಗ್ರೆಸ್ ಎಂದು ಆರೋಪಿಸಿದೆ.