ನವದೆಹಲಿ, ಸೆ 20 (DaijiworldNews/HR): ಬಿಜೆಪಿಯ ಧ್ಯೇಯವಾಕ್ಯವಾದ 'ಸಬ್ಕಾ ಸಾಥ್, ಸಬ್ಕಾ ವಿಶ್ವಾಸ್, ಸಬ್ಕಾ ಪ್ರಯಾಸ್' ಅನ್ನು ಅನುಸರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಮೇಯರ್ಗಳಿಗೆ ಕರೆ ನೀಡಿದ್ದಾರೆ.
ಗುಜರಾತ್ನ ಗಾಂಧಿನಗರದಲ್ಲಿ ಬಿಜೆಪಿಯ ಮೇಯರ್ ಮತ್ತು ಉಪಮೇಯರ್ಗಳ ಕೌನ್ಸಿಲ್ ಅನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ದೇಶಿಸಿ ಮಾತನಾಡಿದ ಅವರು, 'ಆಜಾದಿ ಕಾ ಅಮೃತ ಮಹೋತ್ಸವ'ದ ಸಂದರ್ಭದಲ್ಲಿ ಮುಂದಿನ 25 ವರ್ಷಗಳ ಕಾಲ ಭಾರತದ ನಗರಾಭಿವೃದ್ಧಿಯ ರೂಪುರೇಷೆಯನ್ನು ತಯಾರಿಸುವಲ್ಲಿ ಈ ಸಮಾವೇಶವು ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಇನ್ನು ಭಾರತವು ಬಿಜೆಪಿಯನ್ನು ನಂಬುತ್ತದೆ. ತಳಮಟ್ಟದಿಂದ ಕೆಲಸ ಮಾಡುವುದು ಎಲ್ಲಾ ಮೇಯರ್ ಗಳ ಜವಾಬ್ದಾರಿಯಾಗಿದೆ. ಉತ್ತಮ ಸೌಲಭ್ಯಗಳನ್ನು ಒದಗಿಸಬೇಕು ಮತ್ತು ಬೆಳವಣಿಗೆಯನ್ನು ಉತ್ತಮವಾಗಿ ಯೋಜಿಸಬೇಕು ಎಂದಿದ್ದಾರೆ.