ನವದೆಹಲಿ, ಸೆ 20 (DaijiworldNews/DB): ಬಿಜೆಪಿಯು ಗುಜರಾತ್ನಲ್ಲಿ ಪಿಂಚಣಿ ಯೋಜನೆಯನ್ನು ನಿಲ್ಲಿಸಿ ಸ್ವಾವಲಂಬಿ ಹಿರಿಯ ನಾಗರಿಕರನ್ನು ಅವಲಂಬಿತರನ್ನಾಗಿ ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಸರ್ಕಾರಿ ನೌಕರರು ದೇಶದ ಅಭಿವೃದ್ದಿಗಾಗಿ ಸೇವೆ ಸಲ್ಲಿಸುತ್ತಾರೆ. ಅವರ ಹಕ್ಕಾದ ಪಿಂಚಣಿಯನ್ನು ನಿವೃತ್ತಿ ನಂತರ ನೀಡುವುದು ಸರ್ಕಾರದ ಕರ್ತವ್ಯ. ಈ ರಾಜ್ಯದಲ್ಲಿ ಕಾಂಗ್ರೆಸ್ಗೆ ಅಧಿಕಾರ ನೀಡಿದರೆ ಪಿಂಚಣಿ ವ್ಯವಸ್ಥೆಯನ್ನು ಮರು ಜಾರಿಗೊಳಿಸಲಾಗುವುದು ಎಂದರು.
ರಾಜಸ್ಥಾನ ಮತ್ತು ಛತ್ತೀಸಢಡದಲ್ಲಿ ಈಗಾಗಲೇ ಹಳೆಯ ಪಿಂಚಣಿ ಯೋಜನೆಯನ್ನು ನಾವು ಮರುಜಾರಿಗೊಳಿಸಿದ್ದೇವೆ. ಗುಜರಾತ್ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅದೇ ರೀತಿ ಮಾಡಲಾಗುವುದು ಎಂದವರು ಭರವಸೆ ನೀಡಿದ್ದಾರೆ.