ನವದೆಹಲಿ, ಸೆ 20 (DaijiworldNews/HR): ಗೋಡೆ ಕುಸಿದು ನಾಲ್ವರು ಸಾವನ್ನಪ್ಪಿದ್ದು, 9 ಮಂದಿಯನ್ನು ರಕ್ಷಿಸಿರುವ ಘಟನೆ ನೋಯ್ಡಾದ ಸೆಕ್ಟರ್ -21 ರಲ್ಲಿ ಮಂಗಳವಾರ ಸಂಭವಿಸಿದೆ.
ಸ್ಥಳದಲ್ಲಿನ ಅವಶೇಷಗಳನ್ನು ತೆಗೆದುಹಾಕುವ ಕೆಲಸ ಕಾರ್ಯ ನಡೆಯುತ್ತಿದ್ದು, ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆ ಮತ್ತು ಕೈಲಾಶ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಲ್ವಾಯು ವಿಹಾರ್ನಲ್ಲಿ ಗಡಿ ಗೋಡೆ ಚರಂಡಿಯ ದುರಸ್ತಿಯ ಸಮಯದಲ್ಲಿ ಕಾರ್ಮಿಕರು ಇಟ್ಟಿಗೆಯನ್ನು ತೆಗೆಯುತ್ತಿದ್ದಾಗ, ಇಡೀ ಗೋಡೆ ಕುಸಿದು ಅಪಘಾತ ಸಂಭವಿಸಿದೆ.
ಇನ್ನು ಈ ಸ್ಥಳದಲ್ಲಿ ಒಟ್ಟು 12 ಕಾರ್ಮಿಕರು ಕೆಲಸ ಮಾಡುತ್ತಿದ್ದು, ಸ್ಥಳೀಯರ ಮಾಹಿತಿಯ ಮೇರೆಗೆ ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪಿ ಅವಶೇಷಗಳನ್ನು ತೆಗೆದು ಹಾಕುವ ಕೆಲಸ ನಡೆಯುತ್ತಿದೆ.