ನವದೆಹಲಿ, ಸೆ 20 (DaijiworldNews/MS): ಯುಎಸ್ ಮೂಲದ ವೀಡಿಯೋ ಕಾನ್ಫರೆನ್ಸಿಂಗ್ ಸೇವಾ ಕಂಪನಿ ಜೂಮ್ (Zoom) ವಿಶ್ವದ ಪ್ರಮುಖ ಐಟಿ ದೈತ್ಯ ಗೂಗಲ್ಗೆ ಪೈಪೋಟಿ ನೀಡಲು ಸಿದ್ಧವಾಗಿದೆ. ಜೂಮ್ ಶೀಘ್ರದಲ್ಲೇ ತನ್ನದೇ ಆದ ಇಮೇಲ್ ಸೇವೆಯನ್ನು ಪ್ರಾರಂಭಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ.
ದಿ ಇನ್ಫಾರ್ಮೇಶನ್ನ ವರದಿಯ ಪ್ರಕಾರ, ಗೂಗಲ್ನ ಇಮೇಲ್ ಸೇವೆ Gmail ನಂತೆ, ಜೂಮ್ ಕೂಡ Zmail ಎಂಬ ಇಮೇಲ್ ಸೇವೆಯನ್ನು ಆರಂಭಿಸಲಿದೆ. ಅಲ್ಲದೆ, Zcal ಎಂಬ ಕ್ಯಾಲೆಂಡರ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಿದೆ. Zoom ಮೇಲ್ ಸೇವೆಯು Gmail ಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ. ಈಗಾಗಲೇ ಜೂಮ್ , ಗೂಗಲ್ ಮೀಟ್ ಗೆ ಪ್ರತಿಸ್ಪರ್ಧಿಯಾಗಿ ವಿಡಿಯೋ ಸರ್ವೀಸ್ ಒದಗಿಸುತ್ತಿದೆ
ಅಪ್ಲಿಕೇಶನ್ಗಳು ಸುಮಾರು ಎರಡು ವರ್ಷಗಳಿಂದ ಅಭಿವೃದ್ಧಿಯಲ್ಲಿವೆ. ಈ ವರ್ಷ ನವೆಂಬರ್ನಲ್ಲಿ ಕಂಪನಿಯ ಮುಂಬರುವ ಜೂಮ್ಟೋಪಿಯಾ ಸಮ್ಮೇಳನದಲ್ಲಿ ಸೇವೆಗಳನ್ನು ಘೋಷಿಸುವ ನಿರೀಕ್ಷೆಯಿದೆ.