ಪಶ್ಚಿಮ ಬಂಗಾಳ, ಸೆ 19 (DaijiworldNews/HR): ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪಾರ್ಥ ಚಟರ್ಜಿ ಮತ್ತು ಅವರ ಸಹಾಯಕಿ ಅರ್ಪಿತಾ ಮುಖರ್ಜಿ ಅವರಿಗೆ ಸೇರಿದ 48.22 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿದೆ.
40.33 ಕೋಟಿ ಮೌಲ್ಯದ 40 ಸ್ಥಿರ ಆಸ್ತಿಗಳನ್ನು ಮತ್ತು 7.89 ಕೋಟಿ ರೂ.ಗಳ ಬ್ಯಾಲೆನ್ಸ್ ಹೊಂದಿರುವ 35 ಬ್ಯಾಂಕ್ ಖಾತೆಗಳನ್ನು ಒಳಗೊಂಡಿದ್ದು, ಆಸ್ತಿಗಳಲ್ಲಿ ಫ್ಲಾಟ್ಗಳು, ಫಾರ್ಮ್ಹೌಸ್, ಕೋಲ್ಕತ್ತಾ ನಗರದಲ್ಲಿ ಪ್ರಧಾನ ಭೂಮಿ ಮತ್ತು ಬ್ಯಾಂಕ್ ಬ್ಯಾಲೆನ್ಸ್ ಸೇರಿವೆ.
ಇನ್ನು 2014ರಲ್ಲಿ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗವು (ಎಸ್ಎಸ್ಸಿ) ಪಶ್ಚಿಮ ಬಂಗಾಳದ ಸರ್ಕಾರಿ ಶಾಲೆಗಳಲ್ಲಿ ರಾಜ್ಯ ಮಟ್ಟದ ಆಯ್ಕೆ ಪರೀಕ್ಷೆ (ಎಸ್ಎಲ್ಎಸ್ಟಿ) ಮೂಲಕ ಶಿಕ್ಷಕರ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದ್ದ ವೇಳೆ ಹಗರಣ ನಡೆದಿತ್ತು.