ನವದೆಹಲಿ, ಸೆ 19 (DaijiworldNews/HR): ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಕೃಷ್ಣಾನಗರ ಎಂಪಿ ಕಪ್ ಟೂರ್ನಮೆಂಟ್ನಲ್ಲಿ ಸೀರೆಯುಟ್ಟು ಫುಟ್ಬಾಲ್ ಆಡುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದ್ದು, ಈ ಪೋಟೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಈ ಕುರಿತ ಪೋಟೊ ವನ್ನು ಟ್ವೀಟ್ ಮಾಡಿರುವ ಮಹುವಾ ಮೊಯಿತ್ರಾ , ಕೃಷ್ಣನಗರ ಎಂಪಿ ಕಪ್ ಟೂರ್ನಮೆಂಟ್ 2022 ರ ಫೈನಲ್ನ ಮೋಜಿನ ಕ್ಷಣಗಳು ಇವಾಗಿದ್ದು, ನಾನು ಸೀರೆಯಲ್ಲೇ ಫುಟ್ಬಾಲ್ ಆಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಇನ್ನು ಮಹುವಾ ಸೀರೆ ಉಟ್ಟುಕೊಂಡು ಆಟವಾಡುತ್ತಿರುವ ಪೋಟೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.