ಜಮ್ಮುಕಾಶ್ಮೀರ, ಸೆ 19 (DaijiworldNews/HR): ಟ್ರಕ್ಗೆ ಬೆಂಕಿ ಹೊತ್ತಿಕೊಂಡು ಟ್ರಕ್ ಕಂಡಕ್ಟರ್ ಸುಟ್ಟುಕರಕಲಾಗಿ, ಚಾಲಕ ಅಪಾಯದಿಂದ ಪಾರಾಗಿರುವ ಘಟನೆ ಕಥುವಾ ಜಿಲ್ಲೆಯ ರಾಜ್ಪಥ್ ಪ್ರದೇಶದ ಬಳಿಯ ಪಠಾಣ್ಕೋಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಟ್ರಕ್ಗೆ ಬೆಂಕಿ ಹೊತ್ತಿಕೊಂಡ ತಕ್ಷಣ ಟ್ರಕ್ ಕಂಡಕ್ಟರ್ ಸುಟ್ಟುಕರಕಲಾಗಿದ್ದು, ಚಾಲಕ ಅಲ್ಲಿಂದ ತಕ್ಷಣ ತಪ್ಪಿಸಿಕೊಂಡಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಬೆಂಕಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.