ಬೆಂಗಳೂರು,ಸೆ 19 (DaijiworldNews/MS): ಕರ್ನಾಟಕದಲ್ಲೇ ಕರಾವಳಿಯ ಅವಿಭಜಿತ ಜಿಲ್ಲೆಗಳಾದ ದಕ್ಷಿಣಕನ್ನಡ ಮತ್ತು ಉಡುಪಿ ಕೋಮುಗಲಭೆ ಮತ್ತು ರೌಡಿಸಂನಲ್ಲಿ ಮುಂದಿದೆ ಎನ್ನುವುದೇ ವಿಪರ್ಯಾಸ.!
ಕರ್ನಾಟಕ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಐದು ವರ್ಷಗಳಲ್ಲಿ, ರಾಜ್ಯದಲ್ಲಿ 242 ಕೋಮುಗಲಭೆ ಪ್ರಕರಣಗಳು ದಾಖಲಾಗಿದೆ ಈ ಪೈಕಿ ಶಿವಮೊಗ್ಗದಲ್ಲಿ 57, ದಕ್ಷಿಣ ಕನ್ನಡ 46 ಪ್ರಕರಣ ವರದಿಯಾಗಿ ಈ 2 ಜಿಲ್ಲೆಗಳು ಮೊದಲೆರಡು ಸ್ಥಾನದಲ್ಲಿವೆ. ಉಳಿದಂತೆ ಬಾಗಲಕೋಟೆ 26, ದಾವಣಗೆರೆ 18, ಹಾವೇರಿ 18 ಕೇಸ್ಗಳು ದಾಖಲಾಗಿವೆ. ಮತ್ತೊಂದೆಡೆ, ರೌಡಿಸಂನಲ್ಲಿ ಉಡುಪಿ, ಕೋಲಾರ ಅಗ್ರಸ್ಥಾನ ಪಡೆದಿದ್ದು, ಉಡುಪಿಯಲ್ಲಿ ಕಳೆದ 5 ವರ್ಷದಲ್ಲಿ 431, ಕೋಲಾರ 165, ದಕ್ಷಿಣ ಕನ್ನಡ 152 ಪ್ರಕರಣಗಳು ದಾಖಲಾಗಿವೆ.
ಇನ್ನು ರೌಡಿಸಂನಲ್ಲಿ ಉಡುಪಿ, ಕೋಲಾರ ಅಗ್ರಸ್ಥಾನ ಪಡೆದಿದ್ದು, ಈ ಜಿಲ್ಲೆಗಳಲ್ಲಿ ಅತಿ ಹೆಚ್ಚು ರೌಡಿಸಂ ಆಧಾರಿತ ಪ್ರಕರಣಗಳು ದಾಖಲಾಗಿವೆ.
ಉಡುಪಿ ಜಿಲ್ಲೆಯಲ್ಲಿ ಕಳೆದ ಐದು ವರ್ಷದಲ್ಲಿ 431 ಪ್ರಕರಣಗಳು ದಾಖಲಾದರೆ, ಕೋಲಾರದಲ್ಲಿ165, ದಕ್ಷಿಣ ಕನ್ನಡ 152 ಪ್ರಕರಣಗಳು ದಾಖಲಾಗಿವೆ. ಇನ್ನು, ಬೆಂಗಳೂರು ನಗರ 60, ಕಲಬುರಗಿ 97,ಶಿವಮೊಗ್ಗದಲ್ಲಿ 156 ಪ್ರಕರಣಳು ದಾಖಲುಗೊಂಡಿವೆ.
ಇನ್ನು ರಾಜ್ಯದಲ್ಲಿ ನಾಲ್ಕು ಮತೀಯ ಆಧಾರಿತ ಕೊಲೆ ಪ್ರಕರಣ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು, ಗದಗದ ನರಗುಂದದಲ್ಲಿ ಶಿವಮೊಗ್ಗದಲ್ಲಿ ತಲಾ ಒಂದು ಪ್ರಕರಣಗಳು ನಡೆದಿದೆ.