ಚಂಡೀಗಢ, ಸೆ 19 (DaijiworldNews/MS) : ಚಂಡೀಗಢ ವಿಶ್ವವಿದ್ಯಾನಿಲಯದ ವಿಡಿಯೋ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದ ಇಬ್ಬರು ಹಾಸ್ಟೆಲ್ ವಾರ್ಡನ್ಗಳನ್ನು ಅಮಾನತುಗೊಳಿಸಿದೆ.
ವಿಶ್ವವಿದ್ಯಾಲಯದ 60 ವಿದ್ಯಾರ್ಥಿನಿಯರಿಗೆ ಸಂಬಂಧಿಸಿದ ಸ್ನಾನದ ವಿಡಿಯೋಗಳನ್ನು ಹಾಸ್ಟೆಲ್ ನಲ್ಲಿದ್ದ ಮತ್ತೊಬ್ಬ ವಿದ್ಯಾರ್ಥಿನಿ ವಿಡಿಯೋ ಮಾಡಿ ತನ್ನ ಪ್ರಿಯಕರಿನಿಗೆ ಕಳುಹಿಸಿದ್ದಳು. ಆತ ಆ ವಿಡಿಯೋವನ್ನು ವೈರಲ್ ಮಾಡಿದ್ದರಿಂದ ವಿಶ್ವವಿದ್ಯಾಲಯ ಕ್ಯಾಂಪಸ್ನಲ್ಲಿ ಪ್ರತಿಭಟನೆಗೆ ಕಾರಣವಾಗಿತ್ತು. ಇದೀಗ ಆಡಳಿತ ಮಂಡಳಿಯೂ , ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದ ಇಬ್ಬರು ಹಾಸ್ಟೆಲ್ ವಾರ್ಡನ್ಗಳನ್ನು ಅಮಾನತುಗೊಳಿಸಿದೆ.
ಪ್ರತಿಭಟನೆಯ ಹಿನ್ನಲೆಯಲ್ಲಿ ಸೆಪ್ಟೆಂಬರ್ 19 ಮತ್ತು 20 ರಂದು ವಿದ್ಯಾರ್ಥಿಗಳಿಗೆ ರಜೆ ಎಂದು ಘೋಷಿಸಲಾಗಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.