ಗದಗ, ಸೆ 19 (DaijiworldNews/HR): ಮುಖ್ಯಮಂತ್ರಿ ಬಸವರಾಜ್ ಜೊಮ್ಮಾಯಿ ಅವರು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಮಾತನ್ನು ಬಿಟ್ಟು, ಬುಲ್ಡೋಜರ್ ಮಾದರಿ ಪ್ರಯೋಗಿಸಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಹಾಡಹಗಲೇ ಹಿಂದೂಗಳನ್ನು ಹೊಡೆಯುತ್ತಿದ್ದಾರೆ. ಪೊಲೀಸ್ ಸ್ಟೇಷನ್ಗೆ ಬೆಂಕಿ ಹಚ್ಚುತ್ತಾರೆ. ಪೊಲೀಸರ ಕೈಯಲ್ಲಿ ಬಂದೂಕು ಕೊಟ್ಟಿದ್ದಾರೆ. ಆದರೆ ಹೊಡೀಬೇಡ ಎಂದು ಹೇಳುತ್ತಾರೆ. ನಾನು ಮುಖ್ಯಮಂತ್ರಿ ಆಗಿದಿದ್ದರೆ ಮೊದಲು ಹೊಡಿರಿ ಎಂದು ಪೊಲೀಸರಿಗೆ ಹೇಳುತ್ತಿದೆ ಎಂದರು.
ಇನ್ನು ನಾನೇನಾದರೂ ಸಿಎಂ ಆದರೆ ಕರ್ನಾಟಕದ ಯೋಗಿ ಬಾಬಾ ಆಗುತ್ತಾನೆ ಅನ್ನುವ ಭಯ ನಮ್ಮ ಪಕ್ಷದವರಿಗಿದೆ, ಅದಕ್ಕಾಗಿ ನನ್ನನ್ನು ಸಿಎಂ ಮಾಡುತ್ತಿಲ್ಲ. ನಾನೇನಾದೂ ಒಂದು ವೇಳೆ ಮುಖ್ಯಮಂತ್ರಿ ಆದರೆ ಒಬ್ಬರನ್ನು ಜೈಲಿಗೆ, ಮತ್ತೊಬ್ಬರನ್ನು ಕಾಡಿಗೆ ಕಳಿಸುತ್ತೇನೆ ಎಂದಿದ್ದಾರೆ.
ಹರ್ಷ, ಪ್ರವೀಣ್ ಹತ್ಯೆ ಮಾಡಿದವರಿಗೆ ಕೊಲೆ ಮಾಡಿದವರಿಗೆ ಗುಂಡು ಹಾಕಬೇಕಿತ್ತು. ಹಿಂದೂಗಳು ಸಂಭಾವಿತರು ಎಂದು ಡಿಜೆ ಹಾಕಬೇಡಿ ಎಂದು ಅಡ್ಡಿಪಡಿಸುವುದು ಸರಿನಾ? ನಾನೇನಾದರೂ ಇದ್ದಿದ್ದರೆ ರೂಟ್ ನಿಯಮವನ್ನು ಉಲ್ಲಂಘನೆ ಮಾಡುತ್ತಿದೆ ಎಂದು ಹೇಳಿದ್ದಾರೆ.