ಬಾಗೇಪಲ್ಲಿ, ಸೆ 19 (DaijiworldNews/MS): 'ಕರ್ನಾಟಕವು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಯೋಗಾಲಯವಾಗಿದೆ' ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ.
ಬಾಗೇಪಲ್ಲಿಯಲ್ಲಿ ಭಾನುವಾರ ಸಿಪಿಎಂ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಕದಡಲು ಆರ್ ಎಸ್ಎಸ್ ಮತ್ತು ಬಿಜೆಪಿ ಹೊರಟಿವೆ ಎಂದು ಹೇಳಿದ್ದಾರೆ.
"ಪಠ್ಯಪುಸ್ತಕಗಳಲ್ಲಿ ಆರ್ ಎಸ್ಎಸ್ ಸ್ಥಾಪಕರ ಭಾಷಣವನ್ನು ಪರಿಚಯಿಸಲಾಗಿದ್ದು, ನಾರಾಯಣಗುರು ಮತ್ತು ಪೆರಿಯಾರ್ ಅವರ ವಿಚಾರಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ. ಕೇಸರೀಕರಣದ ಗುರಿಯೊಂದಿಗೆ ಪ್ರಗತಿಪರ ಚಿಂತನೆಗಳನ್ನು ಪಠ್ಯಪುಸ್ತಕಗಳಿಂದ ಹೊರಗಿಡಲಾಗಿದೆ. ಮಾತ್ರವಲ್ಲದೆ ಆರ್ ಎಸ್ಎಸ್ , "ಸ್ವಾತಂತ್ರ್ಯ ಸಂಗ್ರಾಮ"ದ ಇತಿಹಾಸವನ್ನು ತಿರುಚುತ್ತಿದೆ" ಎಂದು ಅವರು ಆರೋಪಿಸಿದ್ದಾರೆ.