ಸಾಂಬಾ, ಸೆ 18 (DaijiworldNews/HR): ಶಂಕಿತ ಪಾಕಿಸ್ತಾನಿ ಡ್ರೋನ್ ಪತ್ತೆಯಾಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಜಾಖ್ನ ಗಡಿ ಪ್ರದೇಶದಲ್ಲಿ ನಡೆದಿದೆ.
ಪಾಕಿಸ್ತಾನದಿಂದ ಡ್ರೋನ್ ಶನಿವಾರ ಸಂಜೆ ಭಾರತದ ಭೂಪ್ರದೇಶವನ್ನ ಪ್ರವೇಶಿಸಿದ್ದು, ಇದು ಸ್ಥಳೀಯರು ಮತ್ತು ಭದ್ರತಾ ಪಡೆಗಳಲ್ಲಿ ಕೋಲಾಹಲಕ್ಕೆ ಕಾರಣವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಡ್ರೋನ್ ಚಕ್ ದುಲ್ಮಾದಿಂದ ಪಾಕಿಸ್ತಾನದ ಹೈದರ್ ಪೋಸ್ಟ್ಗೆ ಮರಳಿದ್ದು, ಹೊಳೆಯುವ ಬಿಳಿ ಬೆಳಕಿನೊಂದಿಗೆ ಡೇರಾ ಮತ್ತು ಮದೂನ್ ಗ್ರಾಮಗಳ ಮೂಲಕ ಹಾದುಹೋಗಿದೆ ಎನ್ನಲಾಗಿದೆ.