ಕೇರಳ, ಸೆ 18 (DaijiworldNews/HR): ಭಾರತ್ ಜೋಡೋ ಯಾತ್ರೆಯು ಕೇರಳದ ಹರಿಪಾದ್ನಿಂದ ಇಂದು ಪುನರಾಂಭಗೊಂಡಿದ್ದು ಈ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಾಲಕಿಯೊರ್ವಳಿಗೆ ಪಾದರಕ್ಷೆ ಸರಿಯಾಗಿ ಹಾಕಿಕೊಳ್ಳಲು ಸಹಾಯ ಮಾಡಿದ್ದು, ಈ ವಿಡಿಯೋ ವೈರಲ್ ಆಗಿದೆ.
ಯಾತ್ರೆಯ 11ನೇ ದಿನದ ವೀಡಿಯೋವೊಂದನ್ನು ಮಹಿಳಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ನೆಟ್ಟಾ ಡಿಸೋಜಾ ಟ್ವೀಟರಿನಲ್ಲಿ ಹಂಚಿಕೊಂಡಿದ್ದು, ಸರಳತೆ ಮತ್ತು ಪ್ರೀತಿ. ದೇಶವನ್ನು ಒಗ್ಗೂಡಿಸಲು ಎರಡೂ ಅಗತ್ಯವಿದೆ ಎಂದು ಬರೆದುಕೊಂಡಿದ್ದಾರೆ.
ಇನ್ನು ರಾಹುಲ್ ಗಾಂಧಿಯವರು ಪಕ್ಷದ ಇತರ ಕಾರ್ಯಕರ್ತರೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಮುಂದೆ ಹೋಗುತ್ತಿದ್ದ ಕಾರ್ಯಕರ್ತನನ್ನು ನಿಲ್ಲಿಸಿ ಪುಟ್ಟ ಬಾಲಕಿಯ ಪಾದರಕ್ಷೆಯನ್ನು ಸರಿ ಮಾಡಲು ಸಹಾಯ ಮಾಡಿದ್ದಾರೆ.